spot_img
spot_img
spot_img
18 C
Belagavi
Thursday, September 29, 2022
spot_img

ಕಸಾಪದಿಂದ ಪುಸ್ತಕ ಬಿಡುಗಡೆ : ಬುದ್ಧ,ಬಸವ, ಅಂಬೇಡ್ಕರ ಜಯಂತಿ ಆಚರಣೆ

spot_img

ವರದಿ: ಸಾದುರೆ ಶಿವಕುಮಾರ

ಬೀದರ :ಮನುಷ್ಯರ ಜೀವನದಲ್ಲಿ ಪ್ರೀತಿ, ನಂಬಿಕೆ ಮತ್ತು ವಿಶ್ವಾಸಗಳು ಕಡಿಮೆ ಆಗಬಾರದು, ಬುದ್ಧ, ಬಸವ, ಅಂಬೇಡ್ಕರ ಅವರಂತಹ ಮಹಾತ್ಮರು ಬೆಳಗಿದ ದೀಪಗಳು ಸೀಮಾತೀತ, ಅವರ ಬೆಳಕಿನ ಕಿರಣಗಳಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ನಿಶ್ಕಲ್ ಮಂಟಪ, ಬೈಲೂರು ಬೆಳಗಾವಿಯ ನಿಜಗುಣಾನಂದ ಮಹಾಸ್ವಾಮಿಗಳು ನುಡಿದರು.

ಅವರು ಇಂದು ವಿದ್ಯಾನಗರದ ಬಸವಕೇಂದ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೈಜದೀಪ ಪ್ರತಿಷ್ಠಾನ, ಬೀದರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಮತ್ತು ಡಾ.ನಿಜಲಿಂಗ ರಗಟೆ ಬರೆದಿರುವ ದೀಪದ ಬೆಳಕು ಹಾಗೂ ಮನಸು ಮನಸುಗಳ ಪಿಸುಮಾತು ಕವನಸಂಕಲನ ಬಿಡುಗಡೆ ಮತ್ತು ಗುಲಬರ್ಗಾ ವಿ.ವಿ.ಕಲಬುರಗಿಯ ಗೌರವ ಡಾಕ್ಟರೇಟ್ ಪುರಸ್ಕøತ ಡಾ.ಸಿದ್ದರಾಮ ಶರಣರು ಬೆಲ್ದಾಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದ ದಿವ್ಯ ನೇತೃತ್ವ ವಹಿಸಿ ಮಾತನಾಡುತ್ತಿದ್ದರು.

ಬುದ್ಧ, ಬಸವ, ಅಂಬೇಡ್ಕರ್ ಅವರು ಬೆಳಕು ಮತ್ತು ಜ್ಞಾನದ ಸಂಕೇತ, ಪ್ರತಿಯೊಬ್ಬರೂ ಅಂಬೇಡ್ಕರ ಅವರ ಜೀವನ ಚರಿತ್ರೆ ಓದಬೇಕು, ಬುದ್ಧನ ಶಾಂತಿ, ಬಸವಣ್ಣನ ಸಮಾನತೆ, ಅಂಬೇಡ್ಕರ್ ಅವರ ಹೃದಯವೈಶಾಲ್ಯತೆ ನಮಗೆ ದಾರಿದೀಪವಾಗಬೇಕೆಂದು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳದವರು ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯವಿಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಅವರ ಐದು ಸ್ಥಳಗಳನ್ನು ಪುಣ್ಯಸ್ಥಳಗಳೆಂದು ಘೋಷಣೆ ಮಾಡಿದ್ದಾರೆ, ಅದೇ ರೀತಿ ಬಸವಣ್ಣನವರ ಸ್ಥಳಗಳನ್ನು ಪುಣ್ಯಸ್ಥಳಗಳೆಂದು ಘೋಷಣೆ ಮಾಡಬೇಕೆಂದು ಹೇಳಿದರು.

ಡಾ.ನಿಜಲಿಂಗ ರಗಟೆ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಿದ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಮಾತನಾಡುತ್ತ, ಹೊಂದಾಣಿಕೆ ಮತ್ತು ಹೋರಾಟ ಇವೆರಡು ತದ್ವಿರುದ್ಧ ಪದಗಳು, ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು, ಎಲ್ಲರೂ ನನ್ನ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳಬೇಕೆನ್ನುವುದು ತಪ್ಪು, ಎಲ್ಲರ ಭಾವನೆಗಳನ್ನು ನಾವು ಗೌರವಿಸಬೇಕು, ಇವತ್ತಿನ ಶಿಕ್ಷಣ ಪದ್ದತಿ ಹಾಗೂ ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಮೌಲ್ಯ ಬಿತ್ತುವ ಕಾರ್ಯ ನಡೆಯುತ್ತಿಲ್ಲ, ಯುವ ಜನತೆಗೆ ದೇಶದಲ್ಲಿ ಬದಲಾವಣೆ ತರುವ ಶಕ್ತಿ ಇದೆ, ಅವರಿಗೆ ಹಿರಿಯರು ಮಾರ್ಗದರ್ಶನ ನೀಡಬೇಕು, ಯುವಕರಲ್ಲಿ ದೇಶದ ಕುರಿತು ಚಿಂತನೆ ಮೂಡಿಸಬೇಕೆಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಬದುಕಿನ ಅನುಭಾವಗಳನ್ನೇ ಶರಣರು ನಮಗೆ ವಚನಗಳ ರೂಪದಲ್ಲಿ ನೀಡಿದ್ದಾರೆ, ಅನೇಕ ಜನರು ಸಮಾಜದಲ್ಲಿ ಗೊಂದಲ ಮೂಡಿಸುವ ಸಾಹಿತ್ಯ ರಚಿಸುತ್ತಾರೆ, ಬಸವಾದಿ ಶರಣರ ವಚನಗಳ ಅಧ್ಯಯನ ಮಾಡಿ ಸಾಹಿತ್ಯ ರಚಿಸಬೇಕೆಂದು ನುಡಿದರು.

ಡಾ.ನಿಜಲಿಂಗ ರಗಟೆಯವರ ದೀಪದ ಬೆಳಕು, ಕವನ ಸಂಕಲನ ಕುರಿತು ಮಾಧುರಿ ಕುಲಕರ್ಣಿ ಮತ್ತು ಮನಸು ಮನಸುಗಳ ಪಿಸುಮಾತು ಕುರಿತು ಡಾ.ಶ್ರೇಯಾ ಮಹೀಂದ್ರಕರ್ ಮಾತನಾಡಿದರು.

ಗೌರವ ಸನ್ಮಾನ ಸ್ವೀಕರಿಸಿದ ಡಾ.ಸಿದ್ದರಾಮ ಶರಣರು ಬೆಲ್ದಾಳ ಅವರು ಮಾತನಾಡಿದರು. ವೇದಿಕೆಯ ಮೇಲೆ ಬಸವಕೇಂದ್ರದ ಅಧ್ಯಕ್ಷರಾದ ಶರಣಪ್ಪ ಮಿಠಾರೆ, ವೈದ್ಯರಾದ ಡಾ.ಸಿ.ಎಸ್.ರಗಟೆ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೂಪಾ ಪಾಟೀಲ ನಿರೂಪಿಸಿದರೆ ಶಿವಶಂಕರ ಟೋಕರೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳನ್ನು ಗೌರವಿಸಲಾಯಿತು.

spot_img

Related News

ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು: ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ಡಿ ಕೆ ಶಿವಕುಮಾರ್...

ಮೂರು ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ ಚವ್ಹಾಣ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -