Ad imageAd image

ಮಹಾರಾಷ್ಟ್ರದಲ್ಲಿ ಇವಿಎಂ ಮೇಲೆ ಸಂಶಯ: ಪ್ರಮಾಣವಚನಕ್ಕೆ ಉದ್ಧವ್‌ ಬಣದ ಬಹಿಷ್ಕಾರ

ratnakar
ಮಹಾರಾಷ್ಟ್ರದಲ್ಲಿ ಇವಿಎಂ ಮೇಲೆ ಸಂಶಯ: ಪ್ರಮಾಣವಚನಕ್ಕೆ ಉದ್ಧವ್‌ ಬಣದ ಬಹಿಷ್ಕಾರ
WhatsApp Group Join Now
Telegram Group Join Now

ಮತಯಂತ್ರಗಳನ್ನು ಬಳಸಿಕೊಂಡು ಫಲಿತಾಂಶವನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಶಾಸಕರ ನೇತೃತ್ವದಲ್ಲಿ ‘ಮಹಾವಿಕಾಸ್‌ ಅಘಾಡಿ’ (ಎಂವಿಎ) ಶಾಸಕರು ಶನಿವಾರ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದರು.

ಶನಿವಾರ ಆರಂಭವಾದ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಇವಿಎಂಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ, ಪ್ರಮಾಣ ವಚನ ಸ್ವೀಕರಿಸಲು ಎಂವಿಎ ಶಾಸಕರು ನಿರಾಕರಿಸಿದರು. ಉದ್ಧವ್‌ ಬಣ ಶಿವಸೇನೆ ಶಾಸಕ ಆದಿತ್ಯ ಠಾಕ್ರೆ ನೇತೃತ್ವದಲ್ಲಿ ಅಘಾಡಿ ಸದಸ್ಯರು ಪ್ರಮಾಣ ವಚನ ಕಾರ್ಯಕ್ರಮ ಬಹಿಷ್ಕರಿಸಿ, ಸಭಾತ್ಯಾಗ ಮಾಡಿದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌, ಉಪ ಮುಖ್ಯಮಂತ್ರಿಗಳಾದ ಏಕನಾಥ್‌ ಶಿಂಧೆ, ಅಜಿತ್‌ ಪವಾರ್‌ ಸೇರಿ ಆಡಳಿತ ಮೈತ್ರಿಕೂಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಹಂಗಾಮಿ ಸ್ಪೀಕರ್‌ ಸ್ಥಾನ ವಹಿಸಿಕೊಂಡಿದ್ದ ಸದನದ ಹಿರಿಯ ಸದಸ್ಯ ಬಿಜೆಪಿಯ ಕಾಳಿದಾಸ್‌ ಕೊಲಂಬ್ಕರ್‌ (9 ಬಾರಿ ಶಾಸಕರಾಗಿ ಆಯ್ಕೆ) ಅವರು ನೂತನ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಇವಿಎಂಗಳ ಮೇಲೆ ಸಂಶಯ ವ್ಯಕ್ತಪಡಿಸಿ ಪ್ರಮಾಣ ವಚನ ಸ್ವೀಕಾರ ಬಹಿಷ್ಕರಿಸಿದ ಪ್ರತಿಪಕ್ಷಗಳ ವಿರುದ್ಧ ಡಿಸಿಎಂ ಅಜಿತ್‌ ಪವಾರ್‌ ಕಿಡಿಕಾರಿದ್ದಾರೆ. ”ಇವಿಎಂಗಳ ಮೇಲೆ ಅನುಮಾನ ಇದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಿ. ಇಲ್ಲವೇ ಕೋರ್ಟ್‌ ಮೆಟ್ಟಿಲೇರಿ. ಶಾಸಕರಾಗಿ ಆಯ್ಕೆಯಾದ ಮೇಲೆ ನಿಯಮದಂತೆ ಪ್ರಮಾಣ ವಚನ ಸ್ವೀಕರಿಸಬೇಕು,” ಎಂದು ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article