spot_img
23.5 C
Belagavi
Sunday, December 4, 2022
spot_img

ಗಡಿ ವಿವಾದ : ಕರ್ನಾಟಕ ಬಸ್ ಗಳಿಗೆ ಮಸಿ ಬಳಿದ ಪುಂಡರು

ಪುಣೆ: ಕರ್ನಾಟಕ ಬಸ್‌ ಗಳಿಗೆ ಕಪ್ಪು ಮಸಿ ಬಳಿದು ಮರಾಠ ಮಹಾಸಂಘ ಪುಂಡಾಟ ಮೆರೆದ ಘಟನೆ ಪುಣೆಯಲ್ಲಿ ನಡೆದಿದೆ.

ಪುಣೆ ಜಿಲ್ಲೆಯ ದೌಂಡ್‌ನಲ್ಲಿ ನಿಪ್ಪಾಣಿ-ಔರಂಗಾಬಾದ್ ಬಸ್‌ಗೆ ಜೈ ಮಹಾರಾಷ್ಟ್ರ ಮತ್ತು ಜಾಹಿರ್ ನಿಷೇಧ್ ಪದಗಳನ್ನು ಕಪ್ಪು ಬಣ್ಣದಲ್ಲಿ ಬರೆದು ತಮ್ಮ ಪುಂಡಾಟವನ್ನು ಮೆರೆದಿದ್ದಾರೆ.

ಗಡಿ ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಮರಾಠ ಮಹಾಸಂಘವು ನವೆಂಬರ್ 25 ರಂದು ಪುಣೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ವಿರುದ್ಧವಾಗಿ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯ ಸಂಕೇತವಾಗಿ, ಮಹಾಸಂಘ ಪುಂಡರು ಪುಣೆಯಲ್ಲಿ ರಾಜ್ಯ ಮತ್ತು ಕರ್ನಾಟಕದ ನಡುವೆ ಸಂಚರಿಸುವ ಬಸ್ಸುಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ.

Related News

50 ಲಕ್ಷ ರೂ,ಗಳ ವೆಚ್ಚದಲ್ಲಿ ಮಂಡೋಳಿ ಗ್ರಾಮದ ರಸ್ತೆಗಳ ಅಭಿವೃದ್ಧಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಂಡೋಳಿ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಗಣಿ ನಿಧಿಯ ವತಿಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು 50 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿದ್ದು, ಶನಿವಾರ...

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಯೋಜನೆಗಳ ಸರಣಿ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 60 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶನಿವಾರ ಕಾಂಕ್ರೀಟ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -