ಬೆಳಗಾವಿ : ಪುಸ್ತಕಗಳನ್ನು ಓದಿದ ಮೇಲೆ ಪುಸ್ತಕಗಳು ನಿಮಗೆ ತಂದೆಯಾಗಿ ಕೈ ಹಿಡಿದು ನಡೆಸುತ್ತದೆ, ತಾಯಿಯಾಗಿ ವಾತ್ಸಲ್ಯ ತೋರಿಸುತ್ತದೆ, ಗುರುಗಳಾಗಿ ಮಾರ್ಗದರ್ಶನ ಮಾಡುತ್ತದೆ, ಗೆಳಯರಾಗಿ ಮನವನ್ನು ಕಲಿಸುತ್ತವೆ ಮತ್ತು ದೀಪಗಳಾಗಿ ನಮ್ಮ ಬಾಳಿಗೆ ಬೆಳಕನ್ನು ನೀಡುತ್ತದೆ ಎಂದು ಖ್ಯಾತ ಲೇಖಕರು ಹಾಗೂ ರಂಗಕರ್ಮಿ ಡಾ. ರಾಮಕೃಷ್ಣ ಮರಾಠೆ ಅವರು ಅಭಿಪ್ರಾಯಪಟ್ಟರು.
ನಗರದ ಕುಮಾರ ಗಂಧರ್ವ ಕಲಾಮಂದಿರ ಆವರಣದ ಬಸವರಾಜ ಕಟ್ಟಿಮನಿ ಸಭಾ ಭವನದಲ್ಲಿ ಬುಧವಾರ (ಫೆ.23) ಹಮ್ಮಿಕೊಳ್ಳಲಾದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಬೆಳಗಾವಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕ ಸಂಸ್ಕೃತಿ ಎಂಬುವುದು ಈ ನಾಡಿನ ಪರಂಪರೆಯಲ್ಲಿ ಇರುವಂತಹ ಬಹು ದೊಡ್ಡ ಬರಹ. ಆದ್ದರಿಂದ ದಾನದಲ್ಲಿ ಶ್ರೇಷ್ಠ ದಾನ ಯಾವುದು ಎಂದರೆ? ಅನ್ನದಾನ ಬಿಟ್ಟರೆ ಪುಸ್ತಕ ದಾನ ಅಥವಾ ಗ್ರಂಥದಾನ. ಈ ಗ್ರಂಥದಾನವನ್ನು ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಹಿರಿಮೆ ಈ ನಾಡಿಗೆಯಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ.ಎಂ.ಎನ್. ನಂದೀಶ್ ಹಂಚೆ ಅವರು, ಕನ್ನಡ ಪುಸ್ತಕ ಪ್ರಾಧಿಕಾರ 1993ರಲ್ಲಿ ರಚನೆಯಾಗಿದೆ. ಈ ಭಾರತದಲ್ಲಿ ಪುಸ್ತಕ ಸಂಸ್ಕೃತಿಯನ್ನು ಅಭಿವೃದ್ಧಿ ಮಾಡಬೇಕು ಮತ್ತು ಉತ್ತೇಜನ ಮಾಡಬೇಕು ಅಂತಾ ಚಿಂತನೆ ಮತ್ತು ಪ್ರಾಧಿಕಾರ ರಚನೆ ಮಾಡಿದೆ ಅಂದ್ರೆ ಅದು ಕರ್ನಾಟಕದಲ್ಲಿ ಮಾತ್ರ. ಕನ್ನಡ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ ರಚಿಸಿರುವ ಪ್ರಾಧಿಕಾರವನ್ನು ಆಕಾಡೆಮಿಗಳನ್ನು ಭಾರತದ ಬೇರೆ ಯಾವ ರಾಜ್ಯದಲ್ಲಿ ಎಲ್ಲೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಖ್ಯಾತ ಲೇಖಕರಾದ ಡಾ. ಸರಜೂ ಕಾಟ್ಕರ್ ಮಾತನಾಡಿದ ಅವರು ಇವತ್ತು ಮಹಿಳೆಯರು ಶಿಕ್ಷಣ ಕಲೆಯಬೇಕಾದರೆ ಸಾವಿತ್ರಿ ಪುಲೆಯರ ಪುಣ್ಯ. ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಕೊಡುತ್ತವೆ. ಈಡಿ ಭಾರತದದಲ್ಲಿ ಕರ್ನಾಟಕ ಶಿಕ್ಷಣಕ್ಕೆ ಮಹತ್ವ ಕೊಡುತ್ತದೆ. ಅದಕ್ಕೆ ಕರ್ನಾಟಕಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರಕಿದೆ ಎಂದು ಹೇಳಿದರು.
ಬಳಿಕ ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಸಂಗಮೇಶ ಪೂಜಾರ ಮಾತನಾಡಿ, ಕನ್ನಡ ಕಟ್ಟುವ ಕೆಲಸ ಮತ್ತು ಬೆಳಸುವ ಕೆಲಸ ಬೆಂಗಳೂರು ವಿಧಾನಸಭೆಯಲ್ಲಿ ಆಗುವುದಿಲ್ಲ, ಅದು ಕನ್ನಡ ಶಾಲೆಗಳಲ್ಲಿ ಮಾತ್ರ ಸಾಧ್ಯ. ಆದ್ದರಿಂದ ಕನ್ನಡ ಪುಸ್ತಕ ಪ್ರಾಧಿಕಾರ ಕೊಟ್ಟಿರುವ ಪುಸ್ತಕಗಳನ್ನು ಮಕ್ಕಳಿಗೆ ಕೊಡಿ. ಗಡಿ ಭಾಗದಲ್ಲಿ ಕನ್ನಡವನ್ನು ಬೆಳಸಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಕಂದಾಯ ವಿಭಾಗದ ವಿವಿಧ ಕಾಲೇಜು ಹಾಗೂ ಶಾಲೆಗಳಿಗೆ ಸುಮಾರು 250 ಕ್ಕು ಹೆಚ್ಚು ವಿವಿಧ ಕಾಲೇಜು ಹಾಗೂ ಶಾಲೆಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಕನ್ನಡ ಮತ್ತು ಸಂಸ್ಖತಿ ಇಲಾಖೆಯ ಸಹಾಯಕ ನಿರ್ಧೇಶಕರಾದ ವಿದ್ಯಾವತಿ ಬಜಂತ್ರಿ ಉಪಸ್ಥಿತರಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿ ಕೆ.ಬಿ, ಕಿರಣ್ ಸಿಂಗ್ ಅವರು ಸ್ವಾಗತಿಸಿ, ವಂದಿಸಿದರು. ಸುನಿತಾ ದೇಶಾಯಿ ಅವರು ನಿರೂಪಿಸಿದರು.ಬೆಳಗಾವಿಯ ನಾಡು ಸುಧಾ ಸಂಗಮ ಸಂಗೀತ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು.