ಮಾರ್ಕಂಡಯ್ಯ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯ ಅಂಗವಾಗಿ ಇಂದು ಬಿ ಕೆ ಕಂಗ್ರಾಳಿ ಗ್ರಾಮದಲ್ಲಿ ಅವಿನಾಶ್ ರಾಮ ಭಾವು ಪೋತದಾರ್ ಅವರ ಪ್ಯಾನೆಲ್ ವತಿಯಿಂದ ಗ್ರಾಮದ ಕಲ್ಮೇಶ್ವರ ಮಂದಿರದಲ್ಲಿ ಪೂಜೆ ಸಲಿಸಿ ಪ್ರಚಾರ ಕಾರ್ಯಕ್ರಮ ಪ್ರಾರಂಭಿಸಿದರು.
ಅವಿನಾಶ್ ಪುಂತದಾರ ಮಾತನಾಡುತ್ತಾ ಕಳೆದ ಮೂರು ವರ್ಷಗಳಿಂದ ಮಾರ್ಖಂಡಯ್ಯ ಸಕ್ಕರೆ ಕಾರ್ಖಾನೆಯನ್ನು ನಡೆಸುತ್ತಾ ಇದ್ದೇವೆ ಸಾಲ ಸೂಲಾ ಮಾಡಿ ಕಾರ್ಖಾನೆ ಒಂದು ಒಳ್ಳೆಯ ರೀತಿಯಲ್ಲಿ ನಡೆಸುತ್ತಾ ಬಂದಿದ್ದೇವೆ. ಇನ್ನು ಮುಂದೆ ಸಕ್ಕರೆ ಕಾರ್ಖಾನೆಯನ್ನು ನಡೆಸಲು ಹಣದ ಅವಶ್ಯಕತೆ ಇದೆ. ಅದನ್ನು ಹೊಂದಿಸಲು ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ, ಈಗ ಇರುವ ಕಾರ್ಖಾನೆ ಜಮೀನು ಅರಣ್ಯ ಇಲಾಖೆಯಿಂದ 11 ಲಕ್ಷ ರೂಪಾಯಿ ನೀಡಿ
30 ವರ್ಷಗಳವರೆಗೆ ಲೀಜ್ ಮೇಲೆ ಪಡೆದುಕೊಂಡಿದ್ದೇವೆ ಅದರ ಜೊತೆಗೆ ನೀರಾವರಿಗಾಗಿ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ನೀರಾವರಿ ಇಲಾಖೆಗೆ ನೀಡಿದ್ದೇವೆ ಎಂದರು.
ಅರಣ್ಯ ಜಮೀನನ್ನು ಖರೀದಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಪತ್ರ ವ್ಯವಹಾರ ನಡೆಯುತ್ತಿದೆ,
ನನ್ನ ಅಧ್ಯಕ್ಷ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಒಳ್ಳೆ ರೀತಿಯಿಂದ ನಡೆದುಕೊಂಡು ಬಂದಿದೆ. ಈಗ ಆಡಳಿತ ಮಂಡಳಿಯ ಚುನಾವಣೆ ಎದುರಿಸುತ್ತಿದ್ದೇವೆ ನಮ್ಮ ಪ್ಯಾನಲ್ 15 ಜನರನ್ನು ಸಂಪೂರ್ಣ ಬಹುಮತದಿಂದ ಆರಿಸಿ ಕಳಿಸಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮನೋಹರ ಹುಕ್ಕೇರಿಕರ್, ಅಶೋಕ್ ನಾಯಕ್, ಅನಿಲ್ ಪಾವಶೆ, ಚೇತಕ್ ಕಾಂಬಳೆ ,ನೀಲಿಮಾ ಪಾವಶೆ ,ಮಸುದಾ ವಸಂತ್ ಮ್ಹಾಳೋಜಿ ,ಪ್ರದೀಪ್ ಅಷ್ಟೇ ಕರ, ಸೈಯದ್, ದತ್ತ ಪಾಟೀಲ್, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು