ವರದಿ : ರತ್ನಾಕರ್ ಗೌಂಡಿ, ಬೆಳಗಾವಿ
ಬೆಳಗಾವಿ: ಮಹಾನಗರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸ್ವತಂತ್ರ ವೀರ ಸಾವರ್ಕರ್ ಭಾವಚಿತ್ರವನ್ನು ಮನೆಮನೆಗೆ ತಲುಪಿಸುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ಭಾರತೀಯ ಜನತಾ ಪಕ್ಷದ ಮಹಾನಗರ ಜನರಲ್ ಸೆಕ್ರೆಟರಿ ಮುರುಘೇಶ್ ಪಾಟೀಲ್ ಅವರ ನೇತೃತ್ವದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಆಟೋರಿಕ್ಷಾ ದ್ವಿಚಕ್ರ ವಾಹನಗಳಿಗೆ ಮತ್ತು ವಾಹನಗಳಿಗೆ ಹಂಚುವ ಮೂಲಕ ಆಂದೋಲನವನ್ನು ಪ್ರಾರಂಭಿಸಿದರು.
ನಂತರ ಪಂಚಾಯತ ಸ್ವರಾಜ ಸಮಾಚಾರ ಜೊತೆ ಮಾತನಾಡಿದ ಅವರು, ವೀರ ಸಾವರ್ಕರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಕಾಂಗ್ರೆಸ್ ಪಕ್ಷ ವಿನಾಕಾರಣ ವೀರ್ ಸಾವರ್ಕರ್ ಅವರನ್ನು ರಾಜಕೀಯವಾಗಿ ದುರಹುದ್ದೇಶದಿಂದಾಗಿ ಅವರಿಗೆ ಅವಮಾನ ಮಾಡುತ್ತಿದೆ.
ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಸಾವರ್ಕರ್ ಅವರು ಸ್ವತಂತ್ರ ಹೋರಾಟಗಾರರು ಅಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆ ಪ್ರತಿಯೊಬ್ಬ ಕಾರ್ಯಕರ್ತರ ಅಲ್ಲದೆ ಪ್ರತಿಯೊಬ್ಬ ದೇಶಭಕ್ತ ಇದನ್ನು ವಿರೋಧಿಸುತ್ತಾನೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಹಾನಗರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.