spot_img
spot_img
spot_img
18.7 C
Belagavi
Monday, September 26, 2022
spot_img

ಸೋರಳ್ಳಿಕರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

spot_img
spot_img

For Breaking News Download App

ವರದಿ: ಪರಮೇಶ.ಡಿ.ವಿಳಸಪೂರೆ

ಔರಾದ್ : ತಾಲೂಕಿನ ಕೊಡಿ ಸಮುದ್ರ ಸಮುದ್ರ ಗ್ರಾಮದ ಸಂದಿಪ್ ವಂಡಗಾಂವೆ.ನಾಗರಾಜ ಜಾತ್ಯೆ.ಪರಮೇಶ್ವರ ಸ್ವಾಮಿ.ಗಣೇಶ ಹಳಕಳೆ.ಲವ ತೋಡಚೇರೆ. ಯುವಕರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಡಾಕ್ಟರ್ ಲಕ್ಷ್ಮಣ ಸೋರಳ್ಳಿಕರ ರವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮುಖಂಡ ಲಕ್ಷ್ಮಣ ಸೋರಳ್ಳಿಕರ್ ಕಾಂಗ್ರೆಸ್‌ ಪಕ್ಷ ದೀನ ದಲಿತರ, ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ ಹಾಗೂ ಎಲ್ಲಾ ಸಮುದಾಯದವರ ಏಳ್ಗೆಗಾಗಿ ದುಡಿಯುವ ಪಕ್ಷವಾಗಿದೆ. ಅಲ್ಲದೆ ಔರಾದ ತಾಲೂಕಿನ ಅನಾಭಿವೃದ್ದಿ ಕಾರ್ಯಗಳನ್ನು ರೋಸಿ ಸಾಕಷ್ಟು ಜನರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಹಲವಾರು ಬಿಜೆಪಿ ಸದಸ್ಯರು ಕೈ ಜೋಡಿಸಲಿದ್ದಾರೆ ಎಂದು ಹೇಳಿದರು.

ಸಂದೀಪ ವಡಗಾಂವೆ ಮಾತನಾಡಿ, ಕಾಂಗ್ರೆಸ್‌ ಪಕ್ಷದ ತತ್ವ ಸಿದ್ದಾಂತ ಅರಿತು, ಅವರ ಅಧಿಕಾರದ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಕಂಡು ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಮುಂದೆಯೂ ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಟೆಯಿಂದ ದುಡಿಯುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣಪ್ಪ ಪಾಟೀಲ್. ‌ಯುವ ತಾಲೂಕ ಅಧ್ಯಕ್ಷರಾದ ದತ್ತಾತ್ರಿ ಬಾಪೋರೆ. ಸಂದಿಪ್ ಮಾನೆ. ಶಂಕು ನಿಸ್ಪತೆ. ಅನೀಲ ಹೇಡೆ. ಪ್ರಭು ಭೇಣೆ. ಅನಿಲ್ ಹೋಳಸಮುದ್ರ. ಅಮೂಲ್ ಬಿರಾದರ್. ಸಂಗಮೇಶ್ ಹಕ್ಯಳ. ಮುಂತಾದವರು ಉಪಸ್ಥಿತರಿದ್ದರು.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -