ಬೆಳಗಾವಿ : ನಗರದಲ್ಲಿಂದು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ಪಾಕಿಸ್ತಾನದ ವಿದೇಶಾಂಗ ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನ ತನ್ನ ಅಸ್ತಿತ್ವ ವನ್ನು ಕಳೆದುಕೊಳ್ಳುವಂತ ಸ್ಥಿತಿಯಲ್ಲಿದೆ.
ಪಾಕಿಸ್ತಾನ ಅಂದರೆ ಭಯೋತ್ಪಾದಕರ ನಿರ್ಮಾಣ ಮಾಡುವ ಫ್ಯಾಕ್ಟರಿ ಎಂದು ಇಡೀ ಪ್ರಪಂಚಕ್ಕೆ ತಿಳಿದಿರುವ ವಿಷಯ. ಈಗಾಗಲೇ ಭಾರತ ಹಲವಾರು ಬಾರಿ ಪಾಕಿಸ್ತಾನಕ್ಕೆ ಪಾಠ ಕಲಿಸಿದೆ ಹೀಗೂ ಕೂಡ ಪಾಕಿಸ್ತಾನ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಇನ್ನು ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ ಪಾಕಿಸ್ತಾನ ನಾಯಿ ಬಾಲ ಹಾಗೆ ಡೊಂಕು ಇದನ್ನ ಎಷ್ಟು ಸರಿ ಮಾಡಿದರು ಅದು ಸರಿಯಾಗುವುದಿಲ್ಲ. ಒಸಮಾ ಬಿನ್ ಲಾಡೆನ್ ಅಂತ ಕುಖ್ಯಾತ ಭಯೋತ್ಪಾದಕ ಅಡಗಿಸಿ ಇಟ್ಟುಕೊಂಡಿದ್ದಂತ ಪಾಕಿಸ್ತಾನ ಭಾರತದ ಕುರಿತು ಮಾತನಾಡಬಾರದು ಎಂದು ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮಹಾನಗರ ಜನರಲ್ ಸೆಕ್ರೆಟರಿ ಆದ ಮುರುಘೇಂದ್ರ ಗೌಡ ಪಾಟೀಲ್ ಮಹಾನಗರ ಪಾಲಿಕೆಯ ಸದಸ್ಯರಗಳಾದ ಹನುಮಂತ ಕೊಂಗಾಲಿ, ಶ್ರೇಯಸ್ ನ ಕಾಡಿ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.