ಬೆಳಗಾವಿ : ಗ್ರಾಮೀಣ ಮಂಡಲ ಕಾರ್ಯಾಲಯದಲ್ಲಿ ಅಲ್ಪಸಮಯ ವಿಸ್ತಾರಕರ ಸಭೆ ಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಜೆಪಿ ಬೆಳಗಾವಿ ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಜೈಪ್ರಕಾಶ್ ಅವರು ಉಪಸ್ಥಿತರಿದ್ದ ವಿಸ್ತಾರಕರನ್ನು ಉದ್ದೇಶಿಸಿ ಮಾತನಾಡಿ, ಬರುವ 10 ದಿನಗಳ ಕಾಲ ತಾವೆಲ್ಲರೂ ಹೇಗೆ ಕೆಲಸ ಮಾಡಬೇಕೆಂದರ ಬಗ್ಗೆ ಮಾರ್ಗದರ್ಶನ ಮಾಡಿದರು .
ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಧನಂಜಯ ಜಾದವ್ ಇವರು ಎಲ್ಲ ಕಾರ್ಯಕರ್ತರನ್ನು ಉದ್ದೇಶಿಸಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
5 ತಿಂಗಳ ಕಾಲ ವಿಸ್ತಾರಕರಾಗಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳಕ್ಕೆ ವಿಜಯಪುರ ದಿಂದ ಬಂದಿರುವ ಶ್ರೀ ಮಂಥನ ಗಾಯಕ್ವಾಡ್ ಇವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು. ಕಾರ್ಯಕ್ರಮದ ಸೂತ್ರ ಸಂಚಲನೆಯನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಘಾಡಿ ಮಾಡಿದರು.