ಬೆಳಗಾವಿ: 200ಯುನಿಟ್ ಉಚಿತ ವಿದ್ಯುತ್ ಘೋಷಿಸಿಸಿ ಎರಡೆ ದಿನದಲ್ಲಿ ಪ್ರತಿ ಯುನಿಟ್ ಕ್ಕೆ ಸರಾಸರಿ70ಪೈಸೆ ವಿದ್ಯುತ್ ದರ ಹೆಚ್ಚಿಸಿರುವ ಹಾಗೂ ಆಧಾರ ಲಿಂಕ್ ಮಾಡದ ರೈತರ ಪಂಪಸೆಟ್ ಗಳ ಅನುದಾನ ಕಡಿತಗೊಳಿಸುವ, ಗೋ ಹತ್ಯೆ ನಿಷೇಧ ಕಾನೂನು ಹಿಂಪಡೆಯವ ಬಗ್ಗೆ ಹಾಗೂ ಹಾಲು ಗ್ರಾಹಕರ ಅನುದಾನ ಕಡಿತ ಮಾಡಿರುವ ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವಿನ ಆದೇಶವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಬೆಳಗಾವಿ ಬಿಜೆಪಿ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರತಿಯೊಬ್ಬ ಗೃಹ ಬಳಕೆದಾರ ಗ್ರಾಹಕರಿಗೆ 200ಯುನಿಟ್ ಉಚಿತ ವಿದ್ಯುತ್ ನೀಡುವದಾಗಿ ಘೋಷಿಸಿ, ಜೂನ್ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತಗೆದುಕೊಂಡಿದ್ದರೆ ಆದರೆ, ಎಪ್ರಿಲ್ 1 ರಿಂದ ಪೂರ್ವಾನ್ವಯಿಸಿ ಎಲ್.ಟಿ ಮತ್ತು ಎಚ್ ಟಿ ಗ್ರಾಹಕರು ಬಳಸುವ ಪ್ರತಿ ಯುನಿಟ್ ವಿದ್ಯುತ್ ಗೆ ಸರಾಸರಿ 70ಪೈಸೆ ಹೆಚ್ಚಿಸಿ ಶೇ 8.31ರಷ್ಟು ಹೆಚ್ಚಳ ಮಾಡಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ನಿಲುವನ್ನು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದ ಜನತೆಗೆ ಉಚಿತ ವಿದ್ಯುತ್ ನೀಡುವ ನಿರ್ಣಯ ಒಂದು ಕಡೆಯಾದರೆ, ವಿದ್ಯುತ್ ದರ ಹೆಚ್ಚಿಸುವ ಕ್ರಮ ಕೈಗೊಳ್ಳುತ್ತಿರುವದು, ಹಾಗೂ ಬರುವ ಆರು ತಿಂಗಳಲ್ಲಿ ರೈತರ ಪಂಪ ಸೆಟ್ ಗಳ ಆರ್.ಆರ್.ನಂಬರಗಳಿಗೆ ರೈತರ ಆಧಾರ್ ಲಿಂಕ್ ಮಾಡಲು ಆದೇಶ ಹೊರಡಿಸಿದ್ದು ಒಂದು ವೇಳೆ ತಪ್ಪಿದರೆ ಸರ್ಕಾರ ಅನುದಾನ ನೀಡುವದಿಲ್ಲ ಎಂದು ಆದೇಶದಲ್ಲಿ ತಿಳಿಸಿರುವದು ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿ ಮೂಡಿಸಿದೆ.
ತಕ್ಷಣ ತಾವುಗಳು ರಾಜ್ಯ ಸರ್ಕಾರದ ಈ ದ್ವಂದ್ವ ನಿಲುವಿನ ಆದೇಶವನ್ನು ರದ್ದುಗೊಳಿಸಿ ರಾಜ್ಯದ ಜನತೆಗೆ ಹಾಗೂ ರೈತೆರಿಗೆ ಸ್ಪಷ್ಟವಾದ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಆಸೆ, ಆಮಿಷಗಳನ್ನು ಒಡ್ಡಿ, ಉಚಿತ ಗ್ಯಾರಂಟಿ ಕಾರ್ಡ್‍ಗಳನ್ನು ಹಂಚಿ ಅಧಿಕಾರಕ್ಕೆ ಬಂದಿದೆ.
ಚುನಾವಣೆಯ ಪ್ರಚಾರದಲ್ಲಿ ಒಂದು ಮನೆಗೆ 200 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿದ ಕಾಂಗ್ರೆಸ್ ಇಂದು ಅಧಿಕಾರಕ್ಕೆ ಬಂದ ಮೇಲೆ ವರ್ಷದ 12 ತಿಂಗಳ ಸರಾಸರಿ ಲೆಕ್ಕವನ್ನು ಹಾಕಿ ಪ್ರತಿ ತಿಂಗಳ ಸರಾಸರಿ ಬಳಕೆಯ 10ಪ್ರತಿಶತ್ ಮಾತ್ರ ಹೆಚ್ಚಿಸುವ ನಾಟಕವಾಡುತ್ತಿದೆ. ಅದಕ್ಕಿಂತ ಹೆಚ್ಚು ಯುನಿಟ್ ವಿದ್ಯುತ್ ಉಪಯೋಗಿಸಿದರೆ ಅದಕ್ಕೆ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳುತ್ತಿದೆ. ಇದು ಜನವಿರೋಧಿ ನೀತಿಯಾಗಿದೆ ಆದ್ದರಿಂದ ಕಾಂಗ್ರೆಸ್‍ನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‍ರವರು ಗ್ಯಾರಂಟಿ ಕಾರ್ಡಗಳನ್ನು ಹಂಚಿದಂತೆ ಮತ್ತು ವಚನ ನೀಡಿದಂತೆ 200 ಯುನಿಟ್‍ವರೆಗೆ ಮನೆಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಇಲ್ಲವಾದರೆ ಈ ಸರ್ಕಾರ ವಚನಭ್ರಷ್ಟ ಸರ್ಕಾರವಾಗುತ್ತದೆ ಆದ್ದರಿಂದ ತಾವು ಮಧ್ಯಪ್ರವೇಶಿಸಿ ನಿರ್ದೇಶನ ನೀಡಬೇಕು.
ಗೋಹತ್ಯೆ ನಿಷೇಧ ಕಾನೂನು ರದ್ದತಿ ಬಗ್ಗೆ ಮಾತನಾಡುತ್ತಿರುವ ರಾಜ್ಯ ಪಶುಸಂಗೋಪನ ಸಚಿವರಾದ ವೆಂಕಟೇಶ್‍ರವರುನ್ನು ತಕ್ಷಣ ಸಚಿವ ಸ್ಥಾನದಿಂದ ಕೇಳಗಿಳಿಸಬೇಕು. ರಾಜ್ಯದಲ್ಲಿ ವಯಸ್ಸಾದ ಹಸುಗಳನ್ನು ಸಾಕಲು ಕಷ್ಟವಾಗುತ್ತದೆ ಆದ್ದರಿಂದ ಗೋ ಹತ್ಯೆ ನಿಷೇಧ ಕಾನೂನನ್ನು ರದ್ದು ಮಾಡಿ ಗೋಹತ್ಯೆಗೆ ಅವಕಾಶ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ ಇದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಆಗ್ರಹಿಸಿದರು.
ನಮ್ಮ ದೇಶದಲ್ಲಿ ಹಸುಗಳನ್ನು ಪೂಜಾ ಸ್ಥಾನದಲ್ಲಿಟ್ಟು ಗೌರವಿಸಲಾಗುತ್ತಿದೆ. ದನಕರುಗಳು ನಮ್ಮ ದೇಶದ ಜನರಿಗೆ ಜೀವನ ಸಂಗಾತಿಗಳಾಗಿವೆ. ಕೃಷಿಯನ್ನು ಮುಂದುವರೆಸಲು, ನಿತ್ಯ ಜೀವನವನ್ನು ನಡೆಸಲು, ಆರ್ಥಿಕವಾಗಿ ಮೇಲೆ ಬರಲು, ಹಸು ಮತ್ತು ಎತ್ತುಗಳು ನಮ್ಮ ರಾಜ್ಯ ಮತ್ತು ದೇಶದಲ್ಲಿ ಬಹುಮುಖ್ಯ ಪಾತ್ರವಹಿಸಿವೆ. ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ಹಸುಗಳನ್ನು ಒದೆ ಮಾಡದೆ ತಾಯಿಯಂತೆ ರಕ್ಷಣೆ ಮಾಡಿಕೊಂಡು ಬಂದಿರುವುದು ನಮ್ಮ ಸಂಸ್ಕøತಿಯಾಗಿದೆ. 1948, 1964 ರಲ್ಲಿ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿತು. ನಮ್ಮ ರಾಜ್ಯದಲ್ಲಿ 2020-21 ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಿದೆ. ಈಗ ಮತ್ತೆ ಇದನ್ನು ರದ್ದುಗೊಳಿಸಿ ಗೋ ಹತ್ಯೆಗೆ ಅವಕಾಶ ನೀಡಿದರೆ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ. ನಮ್ಮ ಮನೆಗಳಲ್ಲಿ ವಯಸ್ಸಾದ ತಂದೆ-ತಾಯಿಯರನ್ನು ಹೇಗೆ ನಾವು ರಕ್ಷಿಸುತ್ತೇವೆಯೋ ಹಾಗೆಯೇ ವಯಸ್ಸಾದ ಹಸುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಕೂಡಲೆ ಸರ್ಕಾರ ಈ ಹೇಳಿಕೆಯನ್ನು ಹಿಂಪಡೆಯಬೆಕೆಂದು ಬಿಜೆಪಿ ಆಗ್ರಹಿಸುತ್ತದೆ.
ಒಕ್ಕೂಟಗಳಿಂದ ನೀಡುತ್ತಿದ್ದ ಹಾಲಿನ ಪ್ರೋತ್ಸಾಹಧನ ಕಡಿತಮಾಡಿ ರಾಜ್ಯದಲ್ಲಿರುವ ಎಲ್ಲಾ ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ 1.5 ರೂ ಗಳ ನೀಡುವ ಮೊತ್ತವನ್ನು ನೀಡುತ್ತಿದ್ದವು. ಈಗ ಪ್ರೋತ್ಸಾಹ ಧನವನ್ನು ನಿಲ್ಲಿಸಿರುತ್ತಾರೆ. ಇದರಿಂದ ಲಕ್ಷಾಂತರ ರೈತರು ಮತ್ತು ಹಾಲು ಉತ್ಪಾದಕರಿಗೆ ತೊಂದರೆಯುಂಟುಮಾಡಿದೆ. ಸರ್ಕಾರ ಮಧ್ಯಪ್ರವೇಶ ಮಾಡಿ ಯಥಾರೀತಿಯಲ್ಲಿ ಹಾಲು ಉತ್ಪಾದಕರಿಗೆ ಒಕ್ಕೂಟಗಳಿಂದ ನೀಡುತ್ತಿದ್ದ 1.5 ರೂಗಳನ್ನು ನೀಡುವಂತೆ ಮಾಡಬೇಕೆಂದು ತಾವು ಸೂಚಿಸಬೇಕೆಂದು ಬಿಜೆಪಿ ತಮ್ಮಲ್ಲಿ ಒತ್ತಾಯಿಸುತ್ತಿದೆ.
ಅಧಿಕಾರಕ್ಕೆ ಬಂದು ಒಂದೆವಾರದಲ್ಲಿ ಇಂತಹ ದ್ವಂದ್ವ ನಿಲುವು ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿರುವ ಸರ್ಕಾರದ ಈ ನಿರ್ಣಯಗಳನ್ನು ಹಿಂದೆ ಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕುಗತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.