ಬೆಳಗಾವಿ : ಸಂಕ್ರಾಂತಿ ವೇಳೆಗೆ ಸರ್ಕಾರ ಪತನದ ಬಗ್ಗೆ ಯೋಗೇಶ್ವರ್ ಹೇಳಿಕೆ ವಿಚಾರ ‘ಭವಿಷ್ಯ ನುಡಿಯುವ ಶಕ್ತಿ ನಮಗಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಸಂವಿಧಾನ ಬದ್ಧವಾಗಿ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದೆ. ರಾಜ್ಯದಲ್ಲಿ ಹೇಗೆ ಸರ್ಕಾರ ಪತನವಾಗಲಿದೆ ಎಂದು ಅವರನ್ನೇ ಕೇಳಿ ಎಂದರು. ಇನ್ನು ಇದೇ ವೇಳೆ ಟಾರ್ಗೆಟ್ ಮಾಡುವುದರಲ್ಲಿ ಬಿಜೆಪಿಯವರು ಬಹಳ ನಿಸ್ಸೀಮರು. ಕಳೆದ 10 ವರ್ಷದಲ್ಲಿ ಬಿಜೆಪಿಯವರು 11 ಸರ್ಕಾರ ಕೆಡವಿದ್ದಾರೆ. ಬಿಜೆಪಿಯವರು ಸಾವಿರಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿದ್ದಾರೆ. 2024ಕ್ಕೆ ದೇಶದಲ್ಲಿ BJP ಸರ್ಕಾರ ಇರಲ್ಲ ಎಂಬುದು ನಮ್ಮ ಅಭಿಪ್ರಾಯ ಎಂದರು.