ಬೆಳಗಾವಿ: ಇಂದು ಬೆಳಗಾವಿ ಕಾಂಗ್ರೆಸ್ ಭವನ ಕಚೇರಿಯಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ್ ಅರಸ್ ಅವರ ಜನುಮದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಗ್ರಾಮೀಣ ಜಿಲ್ಲಾಧ್ಯಕ್ಷರಾದ ವಿನಯ್ ನವಲಗಟ್ಟಿ ಅವರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ವಿನಯ್ ನವಲಗಟ್ಟಿ ದೇಶ ಕಂಡ ಪ್ರತಿಭಾವಂತ ಪ್ರಧಾನಿಗಳಲ್ಲಿ ದಿವಂಗತ ರಾಜೀವ್ ಗಾಂಧಿ ಕೂಡ ಒಬ್ಬರು ಈ ಸಮಯದಲ್ಲಿ ನಾವು ನೋಡುತ್ತಿರುವ ಸೋಶಿಯಲ್ ಮೀಡಿಯಾ ಹಾಗೂ ಕಂಪ್ಯೂಟರ್ ಯುಗವನ್ನು ಪ್ರಾರಂಭಿಸಿದ್ದೆ ರಾಜೀವ್ ಗಾಂಧಿ ಅವರ ಕಾಲದಲ್ಲಿ ಭಾರತಕ್ಕೆ ಒಂದು ಹೊಸ ಬುನಾದಿಯನ್ನು ಹಾಕಿಕೊಟ್ಟ ಮಹಾನ ಧೀಮಂತ ನಾಯಕ.ದೇಶದ ರಕ್ಷಣೆಗಾಗಿ ದೇಶದ ಹಿತಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಪ್ರಧಾನಿ ಎಂದರು.
ಅದೇ ರೀತಿ ಎಲ್ಲರಿಗೂ ಸಮಬಾಳು ಸಮಪಾಲು ಆಧಾರವಾಗಿ ಇಟ್ಟಿರುವ ಕರ್ನಾಟಕದ ಧೀಮಂತ ನಾಯಕರಲ್ಲಿ ಒಬ್ಬರಾದ ದಿವಂಗತ ದೇವರಾಜ್ ಅರಸ್ ಅವರು ನಾಡ ಕಂಡ ಅತ್ಯಂತ ಮುಸ್ತದ್ದಿ ರಾಜಕಾರಣಗಳಲ್ಲಿ ಒಬ್ಬರು ಎಂದು ಸ್ಮರಿಸುತ್ತಾ ಈಗಿನ ರಾಜಕೀಯ ಸನ್ನಿವೇಶಗಳನ್ನು ನೋಡಿದರೆ ಬಡವರಬಗ್ಗೆ ವಿಚಾರ ಮಾಡುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ. ಕೇಂದ್ರ ಸರ್ಕಾರ ಬಡ ಜನತೆಯ ನೆಮ್ಮದಿಯನ್ನ ಹಾಳು ಮಾಡಿದೆ, ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಓಬಿಸಿ ಅಧ್ಯಕ್ಷರಾದ ಮಂಜುನಾಥ್ ತಡಸನೂರ, ಜಿಲ್ಲಾ ಒಬಿಸಿ ಉಪಾಧ್ಯಕ್ಷರಾದ ಡಾ. ಸಂಗಪ್ಪ ಹಡಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ಎ ಈಟಿ ಮಹಾನಗರ ಪಾಲಿಕೆ ಸದಸ್ಯರಾದ ಶಕೀಲ್ ಮುಲ್ಲಾ ಹಾಗೂ ಕಾಂಗ್ರೆಸ್ಸಿನ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.