ಬಾಗಲಕೋಟೆ: ಬಿವಿವಿ ಸಂಘದ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಸ್ಟಡೀಸ್ ವತಿಯಿಂದ ಆಯೋಜಿಸಲಾದ ಬಿಮ್ಸ್ ಕಪ್ 2023 ಅಂತರ್ ಕಾಲೇಜುಗಳ ಕ್ರಿಕೆಟ್ ಕ್ರೀಡಾ ಕೂಟಕ್ಕೆ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ ಚಾಲನೆ ನೀಡಿದರು.
ಬಸವೇಶ್ವರ ಕಲಾ ಮಾಹವಿದ್ಯಾಲಯದ ಮೈದಾನದಲ್ಲಿ ರಿಬ್ಬನ್ ಕತ್ತರಿಸಿ ಬಲೂನು ಹಾರಿಸುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಲ್ಲಿ ಲಿಂಗ ತಾರತಮ್ಯ ಹೋಗಲಾಡಿಸಿ ಕ್ರೀಡಾಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ 6 ಜನ ವಿದ್ಯಾರ್ಥಿಗಳು ಮತ್ತು 5ಜನ ವಿದ್ಯಾರ್ಥಿನಿಯರನ್ನು ಒಳಗೊಂಡ ಟೀಮ್ ಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಸಂಘದ ವಿವಿಧ 6 ಕಾಲೇಜುಗಳಿಂದ ಒಟ್ಟು 8 ತಂಡಗಳು ಸೆಣಸಾಡಲಿದ್ದು ವಿಜೇತ ತಂಡಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ಸೇರಿದಂತೆ 9 ವಿವಿಧ ಹಂತದ ಬಹುಮಾನಗಳನ್ನು ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಎಸ್.ಎ ನಾವಲಗಿ, ಬಿಮ್ಸ್ ಪ್ರಾಚಾರ್ಯರಾದ ಡಾ. ಪ್ರಕಾಶ ವಡವಡಗಿ, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾದ್ಯಾಪಕರು ಮತ್ತು ಕ್ರೀಡಾಪಟುಗಳು ಹಾಜರಿದ್ದರು.