spot_img
spot_img
spot_img
18.7 C
Belagavi
Monday, September 26, 2022
spot_img

ಬೆಳಗಾವಿ ನಗರದಲ್ಲಿ ಭಾರತ ಪರಿಕ್ರಮ ಪ್ರಯುಕ್ತ ಕೊಲ್ಹಾಪೂರವರೆಗೆ ಬೈಕ್ ರ‍್ಯಾಲಿ 

spot_img
spot_img

For Breaking News Download App

ಬೆಳಗಾವಿ : ಬೆಳಗಾವಿ ನಗರದಲ್ಲಿ ಕ್ರೀಡಾ ಭಾರತಿ ವತಿಯಿಂದ ಭಾರತ ಪರಿಕ್ರಮ ಹಿನ್ನೆಲೆಯಲ್ಲಿ ಬೆಳಗಾವಿ ನಗರದಿಂದ ಕೊಲ್ಹಾಪೂರವರೆಗೆ ಬೃಹತ ಬೈಕ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ನಗರದ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನದಲ್ಲಿ ದೇಶಪ್ರೇಮಿಗಳು ಶಿವಾಜಿ ಮಹಾರಾಜರ ಮೂತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ರಾಷ್ಟ್ರಧ್ವಜಕ್ಕೆ ಗೌರವ ವಂದನೆಯನ್ನು ಸಲ್ಲಿಸಿದರು. ಈ ವೇಳೆ ಬೆಳಗಾವಿ ಪರಿಷತ ಸದಸ್ಯರಾದ ಶ್ರೀ ಅರುಣ ಶಹಾಪೂರ, ಬುಡಾ ಅಧ್ಯಕ್ಷರಾದ ಶ್ರೀ ಸಂಜಯ ಬೆಳಗಾವಕರ, ಡಾ. ರವಿ ಪಾಟೀಲ, ಶ್ರೀ ವೀರೇಶ ಕಿವಡಸಣ್ಣವರ, ಶ್ರಿ ವಿಕಾಸ ಪವಾರ ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದು ಬೈಕ ರ್ಯಾಲಿಗೆ ಚಾಲನೆಯನ್ನು ನೀಡಿದರು.

ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರ್ಯಾಲಿ ಆಯೋಜಕರು, ರಾಷ್ಟ್ರ ವಂದನೆಯನ್ನು ಸಲ್ಲಿಸುವ ಉದ್ದೇಶದಿಂದ ಈ ಬೈಕ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಈ ವೇಖೆ ಅನೇಕ ಕ್ರೀಡಾ ಪಟುಗಳು ಹಾಗೂ ಕ್ರೀಡಾ ಪ್ರೋತ್ಸಾಹಕರು ಈ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.

ಇಡೀ ದೇಶದಲ್ಲಿ 244 ಕಡೆ ರ್ಯಾಲಿ ನಡೆಯುತ್ತಿದ್ದು ದೇಶದಲ್ಲಿಯೇ ಸುಮಾರು 18 ಸಾವಿರ ಜನ ಭಾಗಿಯಾಗಿ ಮೂರುವರೆ ಗಂಟೆಯಲ್ಲಿ ಇಡೀ ದೇಶವನ್ನು ಪರಿಕ್ರಮ ಮಾಡುವ ಮೂಲಕ ಬಿಜೆಪಿ ಹಿರಿಯ ನಾಯಕರಾದ ಅಟಲಬಿಹಾರಿ ವಾಜಪೇಯಿರವರಿಗೆ ಗೌರವವನ್ನು ಸಲ್ಲಿಸಲಾಗುತ್ತಿದೆ ಎಂದರು.

ಈ ವೇಳೆ ರ್ಯಾಲಿ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಿಂದ ಪ್ರಾರಂಭವಾಗಿ, ಬಸವೇಶ್ವರ ಸರ್ಕಲ, ಧರ್ಮವೀರ ಸಂಭಾಜಿ ಸರ್ಕಲ ಮಾರ್ಗವಾಗಿ ಡಾ. ಬಾಬಾಸಾಹೇಬ ಅಂಭೇಡ್ಕರ ಉದ್ಯಾನವನದಲ್ಲಿ ಗೌರವವನ್ನು ಸಲ್ಲಿಸಿ ಮುಂದೆ ಕೊಲ್ಹಾಪೂರ ವರೆಗೆ ಸಾಗಿತು.

 

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -