ವರದಿ : ರತ್ನಾಕರ ಗೌಂಡಿ
ಬೆಳಗಾವಿ : ಖಾನಾಪುರ ವಲಯದ ಬೀಜಗರಣಿ ಗ್ರಾಮ ಅರಣ್ಯ ಸಮಿತಿಯ ಜಂಟಿ ಅರಣ್ಯ ಯೋಜನೆಯಡಿಯಲ್ಲಿ ಗ್ರಾಮ ಅರಣ್ಯ ಸಮಿತಿ ಯೋಜನಾ ಪ್ರದೇಶದಲ್ಲಿನ ನಡತೋಪು ಕಟಾವು ನಂತರ ಬಂದ ಲಾಭಾಂಶದಲ್ಲಿ ಗ್ರಾಮದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಸಮಿತಿಯಾಗಿದೆ.
2005/06 ರಲ್ಲಿ ರಚನೆಯಾಗಿರುವ ಗ್ರಾಮ ಅರಣ್ಯ ಸಮಿತಿಯು ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣಾ ಹಾಗೂ ಜೀವ ವೈವಿಧ್ಯತೆ ಯೋಜನೆಯಡಿಯಲ್ಲಿ ಬಿಜಿಗರ್ಣಿ ಗ್ರಾಮವನ್ನು ಆಯ್ಕೆ ಮಾಡಿ ಗ್ರಾಮ ಅರಣ್ಯ ಸಮಿತಿಯ ರಚನೆ ಮಾಡಲಾಗಿತ್ತು .
ನಂತರ ಯೋಜನಾ ಪ್ರದೇಶದಲ್ಲಿ ನಡತೋಪು ಬೆಳೆಸಲಾಗಿತ್ತು ಈ ನಡತೋಪನ್ನು ಐದು ಐದು ವರ್ಷಗಳ ಹಿಂದೆ ಕಟಾವು ಮಾಡಿ ಬಂದ ಲಾಭಾಂಶದಲ್ಲಿ ಅರಣ್ಯ ಸಮಿತಿ ಪಡೆದುಕೊಂಡಿದೆ.
ಈ ಮೊತ್ತದಿಂದ ಗ್ರಾಮದ ಅಭಿವೃದ್ಧಿಗಾಗಿ ಹಾಗೂ ಸ್ವಸಹಾಯ ಸಂಘಗಳ ಅಭಿವೃದ್ಧಿಗಾಗಿ ಮತ್ತು ಅರಣ್ಯ ಅಭಿವೃದ್ಧಿಗಳಾಗಿ ಕಾದಿರಿಸಲಾಗಿತ್ತು .
ಈಗ ಉಪ ಅರಣ್ಯ ಸಂರಕ್ಷಣೆ ಅಧಿಕಾರಿಗಳು ಹರ್ಷ ಭಾನು ಅವರು ಗ್ರಾಮ ಅರಣ್ಯಸಮಿತಿ ತೆಗೆದುಕೊಂಡಿರುವ ಠರಾವವನು ಮಂಜೂರು ನೀಡಿದ್ದು , ಇದರ ಅಂಗವಾಗಿ ಬಿಜುಗರಣಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ.
ಭೂಮಿ ಪೂಜೆಯನ್ನು ವಲಯ ಅರಣ್ಯ ಅಧಿಕಾರಿಗಳಾದ ಕವಿತಾ ಈರನಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರದ ತಮ್ಮಣಾ ಕೋಲ್ಕಾರ್ ನಿರ್ವಹಣಾ ಸಮಿತಿಯ ಸದಸ್ಯರುಗಳು ಹಾಗೂ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ಹಾಣ ಉಪವಿಭಾಗ ಖಾನಾಪುರ, ಗ್ರಾಮ ಅರಣ್ಯ ಸಮಿತಿಯ ಕಾರ್ಯದರ್ಶಿ ಹಾಗೂ ಅರಣ್ಯ ರಕ್ಷಕ ಬಸವರಾಜ ಕಟ್ಟಿಮನಿ, ಉಪ ವಲಯ ಅರಣ್ಯಾಧಿಕಾರಿ ವಿನಾಯಕ ಪಾಟೀಲ, ಗ್ರಾಮದ ಮುಖಂಡರಾದ ಬಾಬು ಪಾಟೀಲ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.