spot_img
spot_img
spot_img
18.2 C
Belagavi
Monday, September 26, 2022
spot_img

ಹ್ಯಾಟ್ರಿಕ್ ಸರದಾರ ಚೌವ್ಹಾಣ್ ಗೆ ಬ್ರೇಕ್ ಹಾಕ್ತಾರಾ ಭೀಮಸೇನರಾವ ಶಿಂಧೆ ?

spot_img
spot_img

For Breaking News Download App

ವರದಿ :ಪರಮೇಶ.ಡಿ.ವಿಳಸಪೂರೆ

ಔರಾದ್: ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೊರಗಿನ ಮತ್ತು ಸ್ಥಳೀಯ ಅಭ್ಯರ್ಥಿಗಳು ಔರಾದ್ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ತಾಲೂಕಿನ ಜನರಲ್ಲಿ ಪಕ್ಷದ ಮುಖಂಡರಲ್ಲಿ ಆತಂಕ ಮನೆ ಮಾಡಿದೆ.

ಬಿಜೆಪಿಯ ಪಕ್ಷದಿಂದ ಮತ್ತೆ ಈ ಬಾರಿಯು ಸಚಿವ ಪ್ರಭು ಚವ್ಹಾಣ ಟಿಕೆಟ್ ಪಡೆಯುತ್ತಾರೆ, ಅದರೆ ಕಳೆದ ಚುನಾವಣೆಯಲ್ಲಿ ಪ್ರಭು ಚವ್ಹಾಣ ಒಬ್ಬ ಶಾಸಕರಾಗಿದ್ದರು. ಆದರೆ ಈ ಬಾರಿ ಅವರು ಸಚಿವರಾಗಿದ್ದು , ಸಚಿವರಾದ ಮೇಲೆ ಪ್ರಭು ಚವಾಣ್ ವರ್ಚಸ್ಸು ಕುಸಿದಿದೆ ಆಡಳಿತದ ವಿರೋಧಿ ಅಲೆ ತಾಲೂಕಿನಾದ್ಯಂತ ಪಸರಿಸಿದೆ ಸಚಿವ ಚವಾಣ್ ಅವರನ್ನು ಸೋಲಿಸುವುದು ಈಗ ಸುಲಭವಾಗಬಹುದು ಎಂದು ತಾಲೂಕಿನ ಜನತೆಯ ಮಾತಾಗಿದೆ.

ಆದರೆ ಕಾಂಗ್ರೆಸ್ ಹೊರಗಿನ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮತ್ತೆ ಪ್ರಭು ಚವ್ಹಾಣ ಅವರಿಗೆ ವಿಜಯದ ಹಾದಿ ಸುಲಭವಾಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತವೆ. ಒಟ್ಟಿನಲ್ಲಿ ಕಾಂಗ್ರೆಸ್ ಈ ಬಾರಿ ಸ್ಥಳೀಯರಿಗೆ ಟಿಕೇಟ್ ನೀಡಿದರೆ ಮಾತ್ರ ಗೆಲುವಿನ ದಡ ಸೇರಬಹುದು ಎಂಬ ಮಾತು ತಾಲೂಕಿನಲ್ಲಿ ಕೇಳಿಬರುತ್ತಿದೆ.

ಕಳೆದ 2019 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಭೀಮಸೇನರಾವ ಶಿಂಧೆ ಅವರ ಹೆಸರು ತಾಲೂಕಿನಾದ್ಯಂತ ಜೊರಾಗಿತ್ತು ಆದರೆ ಚುನಾವಣೆಯ ಕೊನೆಯ ಹಂತದಲ್ಲಿ ಭೀಮಸೇನರಾವ ಶಿಂಧೆ ಅವರ ಟಿಕೆಟ್ ಕೈ ತಪಿಸಿ ವಿಜಯಕುಮಾರ ಕೌಡಳೆ ಅವರಿಗೆ ನಿಡಲಾಗಿತ್ತು. ಈ ಘಟನೆ ತಾಲೂಕಿನ ಜನರಲ್ಲಿ ಬೇಸರ ಮೂಡಿಸಿತು.

ಡಾ.ಭೀಮಸೇನರಾವ ಶಿಂಧೆ ಅವರ ಹೆಸರೇ ಕೆಲವರಿಗೆ ಪ್ರೇರಣದಾಯಕ

ಔರಾದ ತಾಲ್ಲೂಕಿನಲ್ಲಿ ಡಾ. ಸಿಂಧೆ ಅವರ ಹೆಸರು ಕೇಳಿದರೆ ಸಾಕು ಎಲ್ಲರಲ್ಲೂ ಆತ್ಮೀಯತೆಯ ಭಾವ ಎದ್ದು ಕಾಣುತ್ತದೆ. ಎದುರಾಳಿಗಳು ಅವರ ಬಗ್ಗೆ ಮಾತನಾಡಲು ಒಂದು ಸಲ ಹಿಂದೆ ಮುಂದೆ ಯೋಚಿಸುತ್ತಾರೆ. ಅಂತೆಯೇ ಪ್ರತಿ ಹೋಬಳಿ ಮತ್ತು ತಾಲೂಕಿನ ರಾಜಕಾರಣದಲ್ಲಿ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಿದ ನಾಯಕ ಇವರಾಗಿದ್ದಾರೆ. ಡಾ.ಶಿಂಧೆ ಅವರಲ್ಲಿನ ಸಾತ್ವಿಕ ಗುಣ ಮತ್ತು ಎಲ್ಲರನ್ನೂ ಒಂದುಗೂಡಿಸಿಕೊಂಡು ಮುನ್ನಡೆಸಿಕೊಂಡು ಹೋಗುವ ಶಕ್ತಿಯಿಂದ ತಾಲೂಕಿನ ಎಲ್ಲರ ಪ್ರೀತಿಪಾತ್ರರಾಗಿ ಉಳಿದಿದ್ದಾರೆ.

ಡಾ.ಭೀಮಸೇನರಾವ ಶಿಂಧೆ ಬಗ್ಗೆ ತಾಲೂಕಿನಲ್ಲಿ ಪ್ರೀತಿ ಮತ್ತು ಕಾಳಜಿ ಕಾಣುವುದು ಇದೇ ಕಾರಣಗಳಿಂದ, ಯಾರೇ ತಮ್ಮ ಕೆಲಸ ಇದೆ ಎಂದು ಡಾ. ಸಿಂಧೆ ಮನೆಗೆ ಹೋದರೆ ಸಾಕು, ಕೂಡಲೇ ಕೈಗೆ ಪೋನ್ ತೆಗೆದುಕೊಳ್ಳುವ ಮೂಲಕ ಯಾರೇ ಇದ್ದರೂ ಸಹಾಯ ಮಾಡಿ ಎಂಬ ಆದೇಶ ನೀಡುತ್ತಾರೆ. ಇದೇ ಕಾರಣಕ್ಕೆ ಡಾ. ಸಿಂಧೆ ಜನರಿಗೆ ಅಚ್ಚುಮೆಚ್ಚಿನವರಾಗಿದ್ದಾರೆ.

ಈ ಬಾರಿ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಡಾ.ಭೀಮಸೇನರಾವ ಶಿಂಧೆ ಅವರಿಗೆ ಕಾಂಗ್ರೆಸ್ ಪರವಾಗಿ ಟಿಕೆಟ್ ದೊರಕಿದರೆ ಸೊಲಲಿಲ್ಲದ ಸರದಾರ ಪ್ರಭು ಚವ್ಹಾಣ ಅವರನ್ನು ಸೋಲಿಸುವ ಸಮರ್ಥ ನಾಯಕ ಎಂದು ತಾಲೂಕಿನ ಜನತೆಯ ಮಾತಾಗಿದೆ.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -