ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಮೊದಲ ಹಂತದಲ್ಲಿ ಬೆಳಗಾವಿ ನಗರದ ಪ್ರಮುಖ 12 ದೇವಸ್ಥಾನಗಳ ಅಭಿವೃಧ್ದಿ ಹಾಗೂ ಜೀರ್ಣೋಧ್ದಾರಕ್ಕಾಗಿ ರೂ. 02.00 ಕೋಟಿಗಳ ಅನುದಾನವನ್ನು ಮುಜರಾಯಿ ಇಲಾಖೆಯಿಂದ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿದ ಅವರು ನಗರದ ಪ್ರಮುS ದೇವಸ್ಥಾನಗಳಾದ ಖಡಕ ಗಲ್ಲಿಯ ಶ್ರೀ. ವೇತಾಳೇಶ್ವರ ದೇವಸ್ಥಾನಕ್ಕೆ 25.00 ಲಕ್ಷ, ಬಸವಣಗಲ್ಲಿಯ ದೊಡ್ಡ ಬಸ್ತಿ (ಜೈನ ಬಸ್ತಿ)ಗೆ 20.00 ಲಕ್ಷ, ಮಠ ಗಲ್ಲಿಯ ಚಿಕ್ಕ ಬಸ್ತಿಗೆ 10.00 ಲಕ್ಷ, ಶ್ರೀ. ಕಪಿಲೇಶ್ವರ ದೇವಸ್ಥಾನಕ್ಕೆ 25.00 ಲಕ್ಷ, ರಾಮತೀರ್ಥ ನಗರದ ಶ್ರೀ. ಶಿವಾಲಯ ದೇವಸ್ಥಾನಕ್ಕೆ 25.00 ಲಕ್ಷ, ಬಸವ ಕಾಲೋನಿಯ ಬಸವಣ್ಣ ಮಂದಿರಕ್ಕೆ 15.00 ಲಕ್ಷ, ಕೊತವಾಲಗಲ್ಲಿಯ ಶ್ರೀ. ರಾಮಲಿಂಗ ದೇವಸ್ಥಾನಕ್ಕೆ 10.00 ಲಕ್ಷ, ಕಾಳಿ ಅಮರಾಯಿಯ ಶ್ರಿ. ಲಕ್ಷ್ಮೀ ದೇವಸ್ಥಾನ ಮತ್ತು ಶ್ರೀ. ಮಾತಂಗಿ ದೇವಸ್ಥಾನಗಳಿಗೆ 15.00 ಲಕ್ಷ, ಪೊಲೀಸ್ ಹೆಡ್ ಕ್ವಾರ್ಟರ್ಸನ ಶ್ರೀ. ವೀರಭದ್ರೇಶ್ವರ ದೇವಸ್ಥಾನಕ್ಕೆ 10.00 ಲಕ್ಷ, ಹಳೆ ಗಾಂದಿ ನಗರದ ಹೊಸ ಜೈನ ಬಸ್ತಿಗೆ 10.00 ಲಕ್ಷ, ವೀರಭದ್ರ ನಗರದ ಶ್ರೀ. ಹನುಮಾನ ಮಂದಿರಕ್ಕೆ 10.00 ಲಕ್ಷ, ಆಂಜನೇಯ ನಗರದ ಶ್ರೀ. ಗಣೇಶ ದೇವಸ್ಥಾನದ ಅಭಿವೃಧ್ದಿಗೆ 25.00 ಲಕ್ಷಗಳಂತೆ ಒಟ್ಟಾರೆಯಾಗಿ 12 ದೇವಸ್ಥಾನಗಳ ಜೀರ್ಣೋಧ್ದಾರಕ್ಕಾಗಿ 02.00 ಕೋಟಿಗಳ ಅನುದಾನವನ್ನು ಮಂಜೂರು ಮಾಡಿಸಲಾಗಿದೆ.
ಈಗ ಸದ್ಯದಲ್ಲಿ 12 ದೇವಸ್ಥಾನಗಳ ಅಭಿವೃದ್ದಿ ಹಾಗೂ ಜೀರ್ಣೋದ್ದಾರಕ್ಕಾಗಿ ಅನುದಾನವನ್ನು ಮಂಜೂರು ಮಾಡಿಸಲಾಗಿದೆ ನಂತರದ ದಿನಗಳಲ್ಲಿ ನಗರದ ಉಳಿದ ದೇವಸ್ಥಾನಗಳ ಪೂರ್ಣ ದಾಖಲೆಗಳನ್ನು ನೀಡಿದ್ದಲ್ಲಿ ಅಂತಹ ದೇವಸ್ಥಾನಗಳ ಅಭಿವೃಧ್ದಿಗಾಗಿ ಅನುದಾನವನ್ನು ಮಂಜೂರು ಮಾಡಿಸಲಾಗುತ್ತದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ ಅವರು ನಗರದ ಎಲ್ಲ ದೇವಸ್ಥಾನಗಳ ಅಭಿವೃಧ್ದಿಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.