Ad imageAd image

Belagavi: ಯಾರದೋ ತಪ್ಪಿಗೆ 20 ಕೋಟಿ ರೂ. ದಂಡ ಬರೆಸುತ್ತಾ ಬೆಳಗಾವಿ ಮಹಾನಗರ ಪಾಲಿಕೆ?

ratnakar
Belagavi: ಯಾರದೋ ತಪ್ಪಿಗೆ 20 ಕೋಟಿ ರೂ. ದಂಡ ಬರೆಸುತ್ತಾ ಬೆಳಗಾವಿ ಮಹಾನಗರ ಪಾಲಿಕೆ?
WhatsApp Group Join Now
Telegram Group Join Now

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ (mahanagar palike) 20 ಕೋಟಿಯ ದಂಡ ತುಂಬುವಂತೆ ಹೈಕೋರ್ಟ್ ನೀಡಿರುವ ಆದೇಶ ಭಾರಿ ಕುತೂಹಲ ಮೂಡಿಸಿದೆ.

ಮಾಜಿ ನಗರಸೇವಕರಗಳ ಸಂಘದ ಮಾಜಿ ಮಹಾಪೌರ ಶಿವಾಜಿ ಸುಂಡಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ (belagavi) ಮಹಾನಗರ ಪಾಲಿಕೆ ವಿರುದ್ಧ ಪಿಐಎಲ್ (pil) ದಾಖಲಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ಮಾಜಿ ಮಹಾಪೌರ ರಮೇಶ್ ಕುಡಚಿ (ramesh kudachi) ಸುದ್ದಿಗಾರರಿಗೆ ತಿಳಿಸದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಭೆಯಲ್ಲಿ ಮೂರು ನಿರ್ಣಯ ಕೈಗೊಳ್ಳಲಾಗಿದೆ ಕಿಲಾರಿ ಡ್ಯಾಮ್ (kilari dam) ದಿಂದ 2 mo ಬೆಳಗಾವಿ ಜನತೆಗೆ ಕುಡಿಯುವ ನೀರು ಪೂರೈಸಬೇಕು ಹಾಗೂ ಬೆಳಗಾವಿ ದುಂಡಮಂಡಳ ಮಹಾನಗರ ಕುರಿತಾಗಿ ಸಂಸದ ಜಗದೀಶ್ ಶೆಟ್ಟರ್ ಅವರ ಜೊತೆ ಚರ್ಚ ಮಾಡಲಾಗುವುದು, ಅದರಂತೆ ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಪಿಐಎಲ್ ದಾಖಲಿಸಲು ನಿರ್ಣಯ ಕೊಯಗೊಳ್ಳಲಾಗಿದೆ ಎಂದರು.

ಇನ್ನು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 20 ಕೋಟಿ ಹಗರಣದ ಕುರಿತಾಗಿ ಪ್ರಸ್ತಾಪಿಸಿದ ಮಾಜಿ ಶಾಸಕ ರಮೇಶ್ ಕುಡಚಿ ವಿಷಯದ ಕುರಿತಾಗಿ ಹಲವು ಕಾನೂನಾತ್ಮಕ ಪ್ರಶ್ನೆಗಳನ್ನು ಹಾಗೂ ಮಹಾನಗರ ಪಾಲಿಕೆ ಕೈಗೊಂಡಿರುವ ಬೇಕಾಬಿಟ್ಟಿ ನಿರ್ಣಯಗಳು ಕುರಿತಾಗಿ ದಿನಾಂಕ: 11-11-2019 ರಲ್ಲಿ ಶಹಪುರ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆಯ ಪಿ.ಬಿ ರಸ್ತೆಗೆ 80pt ರಸ್ತೆ ನಿರ್ಮಾಣಕ್ಕೆ ಟೆಂಡರ್ ಪಾಸ್ ಆಗಿದ್ದು ದಿ.5-11-2019ರಂದು ಮಹಾನಗರ ಪಾಲಿಕೆ ಆಯುಕ್ತರು NOC ನೀಡಿದ್ದಾರೆ. ಇಲ್ಲದ ನಿಯಮವನ್ನು ಪಾಲಿಸಿ ಆರು ದಿನಗಳಲ್ಲಿಯೇ ಟೆಂಡರ್ ಹೇಗೆ ಪಾಸಾಗುತ್ತದೆ ? ಹಾಗೂ ಈ ವಿಷಯವಾಗಿ ಸ್ಮಾರ್ಟ್ ಸಿಟಿ ಅವರಿಗೆ ಕೇಳಿದರೆ ಅವರು ಮಹಾನಗರ ಪಾಲಿಕೆ NOC ನೀಡಿದೆ ಅದಕ್ಕೆ ಸ್ಮಾರ್ಟ್ ಸಿಟಿ ರಸ್ತೆ ನಿರ್ಮಾಣ ಮಾಡಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಹಾನಗರ ಪಾಲಿಕೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ . ಹಾಗಾದ್ರೆ ವಿವಾದಿತ ಕಟ್ಟಡಗಳು ಮತ್ತು ರಸ್ತೆತೆರವು ಗಳಿಸಿರುವುದು ಯಾರು ? ಎಂಬುದಕ್ಕೆ ಉತ್ತರ ಇಲ್ಲ ಹಾಗೂ ಮಹಾನಗರ ಪಾಲಿಕೆಯ ಕಾನೂನು ಅಧಿಕಾರಿ ರಸ್ತೆ ನಿರ್ಮಾಣದ ನಂತರ ಭೂಸ್ವಾಧೀನ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಸಭೆಯಲ್ಲಿ ಹೇಳುತ್ತಾರೆ. ಇದು ಕೂಡ ನಿಯಮದ ಉಲ್ಲಂಘನೆಯಾಗಿದೆ ಎಂದರು.

ಅದರಂತೆ ಜಿಲ್ಲಾಧಿಕಾರಿಗಳು ನಾಲ್ಕು ಪ್ರಕರಣಗಳನ್ನು ವಿಚಾರಣೆಗೊಳಪಡಿಸಿ ರಸ್ತೆ ನಿರ್ಮಾಣ ಸ್ಮಾರ್ಟ್ ಸಿಟಿ ಮಾಡಿರುವುದರಿಂದಾಗಿ ಬೆಳಗಾವಿ ಉಪವಿಭಾಗ ಅಧಿಕಾರಿಗಳಿಗೆ ಪತ್ರ ಬರೆದು ಸ್ಮಾರ್ಟ್ ಸಿಟಿ ಅವರು ಪರಿಹಾರ ನೀಡಬೇಕೆಂದು ತಿಳಿಸಿರುತ್ತಾರೆ. ಎಲ್ಲಾ ಪ್ರಕರಣಗಳು ಗೊಂದಲದ ಗೂಡಾಗಿದ್ದು ಇದರಲ್ಲಿ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಬೆಳಗಾವಿ ಜನರ ತೆರಿಗೆ ಹಣವನ್ನು ದಂಡದ ರೂಪದಲ್ಲಿ ದುರ್ಬಳಿಕೆ ಮಾಡುತ್ತಿರುವುದು ವಿಷಾದನೀಯವಾಗಿದೆ. ಆದ್ದರಿಂದ ಮಾಜಿನಗರ ಸೇವಕರ ಸಂಘ ಬೆಳಗಾವಿ ಜನತೆಯ ಹಿತಾಸಕ್ತಿಗಾಗಿ ಪಾಲಿಕೆ ವಿರುದ್ಧ ಪಿಐಎಲ್ ದಾಖಲು ಮಾಡಲಿದ್ದೇವೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

WhatsApp Group Join Now
Telegram Group Join Now
Share This Article