ಬೆಂಗಳೂರು : ಎಷ್ಟೇ ಕಠಿಣ ನಿಯಮಗಳು, ಕಾನೂನು ಜಾರಿಗೆ ತಂದರು ವಾಹನಗಳ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ರಸ್ತೆ ಅಪಘಾತದಲ್ಲಿ ಬಲಿಯಾಗುವರ ಸಂಖ್ಯೆ ಹೆಚ್ಚುತ್ತಿದೆ.
2021 -2022 ರ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 816 ರಸ್ತೆ ಅಪಘಾತದಲ್ಲಿ ಬಲಿಯಾಗುವ ಮೂಲಕ ರಾಜ್ಯದಲ್ಲಿ ಬೆಳಗಾವಿ ಮೊದಲ ಸ್ಥಾನದಲ್ಲಿದೆ.
ನಂತರದ ಸ್ಥಾನದಲ್ಲಿ ಬೆಂಗಳೂರು ನಗರದಲ್ಲಿ 633, ತುಮಕೂರು ಜಿಲ್ಲೆಯಲ್ಲಿ 596, ಮೈಸೂರು 510 ಮತ್ತು ಬೆಂಗಳೂರು ನಗರ ಹೊರತುಪಡಿಸಿ ಬೆಂಗಳೂರು ಜಿಲ್ಲೆಯಾದ್ಯಂತ 507 ಬಲಿಯಾಗಿವೆ.
ಇನ್ನು 2021- 22ರಲ್ಲಿ ರಾಜ್ಯದಲ್ಲಿ 34,394 ಅಪಘಾತಗಳು ವರದಿಯಾಗಿದ್ದು, 9,868 ಸಾವುಗಳು ಮತ್ತು 40,483 ಮಂದಿ ಗಾಯಗೊಂಡಿದ್ದಾರೆ.
ಅಂದರೆ ಆ ಅವಧಿಯಲ್ಲಿ ರಾಜ್ಯದಲ್ಲಿ ಪ್ರತಿದಿನ ಸರಾಸರಿ 94 ಅಪಘಾತಗಳು ಮತ್ತು 27 ಸಾವುಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.