ದೇಶದ ವಿವಿಧ ಜಿಲ್ಲೆಗಳಲ್ಲಿ ವಂದೇ ಮಾತರಂ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಆದರೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ರಾಜ್ಯದಲ್ಲಿ ತನ್ನದೆ ಕೊಡುಗೆ ನೀಡುತ್ತಿರುವ ಬೆಳಗಾವಿ ಜಿಲ್ಲೆಗೆ ,ಮಾತ್ರ ಈ ವಂದೇ ಮಾತರಂ ನಿಲುಕದ ನಕ್ಷತ್ರವಾಗಿದ್ದು ಇದಕ್ಕೆ ಕಾರಣವೇನು ಎಂದು ಬೆಳಗಾವಿ ಸಂಸದೆ ಮಂಗಳ ಅಂಗಡಿ , ಚಿಕ್ಕೋಡಿ ಸಂಸದರಾದ ಅಣ್ಣ ಸಾಹೇಬ್ ಜೊಲ್ಲೆ, ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ವಿವರಣೆ ಕೊಡಬೇಕಿದೆ.
ಬೆಳಗಾವಿ ಜಿಲ್ಲೆಯಿಂದ ಹೆಚ್ಚುಮತ ಪಡೆಡು ಗೆದ್ದು ಸಂಸತ್ ಸೇರಿದ ಿವರ ಹತ್ತಿರ ಬೆಳಗಾವಿ ಜಿಲ್ಲೆಗೆ ವಂದೇ ಭಾರತ್ ರೈಲ್ವೆ ಸೇವೆ ಯಾಕೆ ಇಲ್ಲ ? ಎಂಬ ಉತ್ತರವಿಲ್ಲ. ಬೆಳಗಾವಿ ಹಾಗೂ ಉತ್ತರ ಕರ್ನಾಟಕಕ್ಕೆ ಸೀಮಿತವಾಗಿರುವ ಯೋಜನೆಗಳು ಒಂದೊಂದಾಗಿ ಬೇರೆಯವರ ಪಾಲಾಗುತ್ತಿವೆ. ಬೆಳಗಾವಿ ಜನತೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಂಸದರುಗಳಿಂದ ಅನ್ಯಾಯವಾಗುತ್ತಲೇ ಇದೆ ಇದನ್ನು ಉತ್ತರ ಕರ್ನಾಟಕದ ಜನರು ಮೌನವಾಗಿ ನೋವನ್ನು ಅನುಭವಿಸುತ್ತಲೇ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ಸೌಲಭ್ಯಗಳನ್ನು, ಯೋಜನೆಗಳನ್ನು ಜಾರಿಮಾಡದೇ ಅಭಿವೃದ್ಧಿ ಪಠಣ ಮಾಡುತ್ತಿರುವ ರಾಜಕಾರಣಿಗಳು ಅದೇಗೆ ಅಭಿವೃದ್ಧಿ ಮಾಡುತ್ತಾರೋ ಗೊತ್ತಿಲ್ಲ.
ಹುಬ್ಬಳ್ಳಿ ಧಾರವಾಡದವರಿಗೆ ವಂದೇ ಭಾರತ್ ರೈಲ್ವೆ ಸಂಚರಿಸುತ್ತಿರುವುದು ಸಂತೋಷದ ವಿಷಯವಾದರೂ ಕೂಡ ಅದು ಬೆಳಗಾವಿಗೂ ಸಂಚರಿಸಬೇಕೆಂಬುದು ಇಲ್ಲಿಯ ಜನತೆಯ ಬಹು ನಿರೀಕ್ಷೆಯಾಗಿತ್ತು ಈ ನೀರಿಕ್ಷೆಗೆ ನಮ್ಮವರೇ ತಣ್ಣೀರೆರಚಿದ್ದು ದುಃಖದ ಸಂಗತಿ.
ಜೂನ್ 26ರಿಂದ ಬೆಂಗಳೂರು, ಹುಬ್ಬಳ್ಳಿ, ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಗೊಳಿಸಿದೆ. ಈ ಪ್ರಕಟಣೆಯಲ್ಲಿ ವಂದೇ ಭಾರತ್ ರೈಲು ಸಂಚಾರ ಮಾರ್ಗದಲ್ಲಿ ಬೆಳಗಾವಿ ಹೆಸರೇ ಇಲ್ಲದೆ ಇರುವುದು ಬೆಳಗಾವಿ ಜನತೆ ಹಾಗೂ ಬೆಳಗಾವಿ ಜಿಲ್ಲೆ ಜನತೆಗ ಬೇಸರ ಉಂಟು ಮಾಡಿದೆ.
ಒಂದೇ ಭಾರತದ ವಿಶೇಷತೆ:
ಒಂದೇ ಭಾರತ ರೈಲು ಇತರ ರೈಲು ವ್ಯವಸ್ಥೇಗಿಂತ ಬಿನ್ನವಾದ ಮತ್ತು ಹೈಜೆನಿಕ್ ವ್ಯವಸ್ಥೆಯನ್ನು ಒಳಗೊಂಡಿದ್ದು ರೈಲಿನಲ್ಲಿ ಉಪಹಾರ, ಸುರಕ್ಷಿತ ಆಸನಗಳ ವ್ಯವಸ್ಥೆ, ರೈಲಿಗೆ ದೊಡ್ಡ ಕಿಟಕಿಗಳು, ಆಟೋಮೆಟಿಕ್ ಡೋರ್ ಅಲಾಮ್೯, ಸಿಸಿ ಟಿ ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ರೈಲು ಪ್ರತಿ ದಿನ ಬೆಳಗ್ಗೆ 05:45ಕ್ಕೆ ಬೆಂಗಳೂರಿನಿಂದ ಹೊರಟು ದಾವಣಗೆರೆ ಹುಬ್ಬಳ್ಳಿ ಮಾರ್ಗವಾಗಿ ಮಧ್ಯಾಹ್ನ 12:40ಕ್ಕೆ ಧಾರವಾಡ ತಲುಪಲಿದೆ. ಮಧ್ಯಾಹ್ನ 1. 15ಕ್ಕೆ ಧಾರವಾಡದಿಂದ ಹೊರಟು ರಾತ್ರಿ 8 :10 ಕ್ಕೆ ವಾಪಸ್ ಬೆಂಗಳೂರಿಗೆ ತಲುಪಲಿದೆ ಎಂದು ನಿವೃತ್ತ ರೈಲ್ವೆ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.