ಬೆಂಗಳೂರು: ಗಡಿ ಜಿಲ್ಲೆ ಬೆಳಗಾವಿ ಡಿ.26 ಮತ್ತು 27ರಂದು ದೇಶದ ಎಲ್ಲಕಾಂಗ್ರೆಸ್ ನಾಯಕರ ಸಮಾಗಮದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯ 150 ಸದಸ್ಯರು ಒಳಗೊಂಡು ದೇಶದ ಮೂಲೆಮೂಲೆಗಳಿಂದ ಪಕ್ಷದ 300ಕ್ಕೂ ಹೆಚ್ಚು ಗಣ್ಯ ನಾಯಕರು ‘ಕುಂದಾ ನಗರಿ’ಯಲ್ಲಿ ಒಟ್ಟುಗೂಡಲಿದ್ದಾರೆ. ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಸ್ಥಿತಿಧಿಯಲ್ಲಿದ್ದಾಗ 1924ರಲ್ಲಿಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದು ಇದೇ ಬೆಳಗಾವಿಯಲ್ಲಿ.
ಆ ಅಧಿವೇಶನದ ಶತಮಾನೋತ್ಸವ ಸಮಾರಂಭ ಇದೇ 26ರಂದು ಬೆಳಗಾವಿಯಲ್ಲಿ ನಡೆಯಲಿದೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ ಈ ಕಾರ್ಯಕ್ರಮಕ್ಕೆ ಡಿ.26ರಂದು ದಿಲ್ಲಿಯಿಂದ ಎರಡು ವಿಶೇಷ ವಿಮಾನಗಳಲ್ಲಿಗಣ್ಯರ ಆಗಮನವಾಗಲಿದೆ.
ಗಾಂಧೀಜಿಯವರ ಅಧ್ಯಕ್ಷತೆ ಹಾಗೂ ಪಂಡಿತ್ ಜವಾಹರ ಲಾಲ್ ನೆಹರು ಮತ್ತು ರಾಜ್ಯದವರೇ ಆದ ಗಂಗಾಧರರಾವ್ ದೇಶಪಾಂಡೆ ಅವರು ಪ್ರಧಾನ ಕಾರ್ಯದರ್ಶಿಧಿಗಳಾಗಿದ್ದ ಕಾಂಗ್ರೆಸ್ ಅಧಿವೇಶನ ನಡೆದು 100 ವರ್ಷ ತುಂಬಿದೆ. ರಾಜ್ಯದಲ್ಲಿಆಡಳಿತ ಪಕ್ಷವಾಗಿ ಕಾಂಗ್ರೆಸ್ ಈ ಶತಮಾನೋತ್ಸವದ ಐತಿಹಾಸಿಕ ಸಂದರ್ಭವನ್ನು ಅದ್ಧೂರಿ ಹಾಗೂ ಅಭೂತಪೂರ್ವಧಿವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ. ಪಕ್ಷ ಸಂಕಷ್ಟದ ಸ್ಥಿತಿಯಲ್ಲಿದ್ಧಾಗಲೆಲ್ಲಾ ಶಕ್ತಿ ತುಂಬುವ ಕರ್ನಾಟಕದಲ್ಲಿ ಕಾಂಗ್ರೆಸ್ ಮಹಾಧಿವೇಶನದ ಶತಮಾನೋತ್ಸವದ ಮೂಲಕ ಈಗಲೂ ಮತ್ತೊಂದು ಸಂದೇಶ ನೀಡುವ ಆಶಯದೊಂದಿಗೆ ತಯಾರಿ ನಡೆದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಜತೆಗೆ, ಎಲ್ಲಎಐಸಿಸಿ ಮುಂಚೂಣಿ ನಾಯಕರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂಗಳು, ಸಿಎಲ್‌ಪಿ ನಾಯಕರು, ಎಲ್ಲರಾಜ್ಯಗಳ (ಪಿಸಿಸಿ) ಅಧ್ಯಕ್ಷರು ಪಾಲ್ಗೊಳ್ಳುತ್ತಿದ್ದಾರೆ. ಭರ್ಜರಿ ತಯಾರಿ: ಕಳೆದ ವಾರವಷ್ಟೇ ಮುಗಿದ ವಿಧಾನಮಂಡಲ ಅಧಿವೇಶನದ ಜತೆಜತೆಗೇ ಬೆಳಗಾವಿಯಲ್ಲಿಎರಡು ದಿನಗಳ ಪಕ್ಷದ ಕಾರ್ಯಕ್ರಮಕ್ಕೂ ಭರ್ಜರಿ ಸಿದ್ಧತೆಗಳು ನಡೆದಿದ್ದು, ತಯಾರಿ ಬಹುತೇಕ ಅಂತಿಮ ಹಂತ ತಲುಪಿದೆ.