spot_img
spot_img
spot_img
21.1 C
Belagavi
Friday, September 30, 2022
spot_img

ಶೀಘ್ರವೇ 300 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ: ಸಚಿವ ಬಿ. ಸಿ. ಪಾಟೀಲ 

spot_img

ಬೆಂಗಳೂರು : ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ಪೈಕಿ 300 ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಜನವರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲು ಒಪ್ಪಿಹೆ ನೀಡುವಂತೆ ಸಚಿವರು ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದರು.ಅದರಂತೆ ಆರ್ಥಿಕ ಇಲಾಖೆ ಈಗ‌ ಒಪ್ಪಿಗೆ ಸೂಚಿಸಿದೆ.

300 ಹುದ್ದೆಗಳನ್ನು ಕರ್ನಾಟಕ ಕೃಷಿ ಸೇವೆಗಳು ( ವೃಂದ ಮತ್ತು ನೇಮಕಾತಿ ) ನಿಯಮಗಳು , 2021 ರಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿಯಮಾನುಸಾರ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ

ಕೃಷಿ ಇಲಾಖೆ (ಸೇವೆಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಜೋನ್ ಪುಕಾಶ್ ರೋಡ್ರಿಗಸ್ ಅವರು ಕೃಷಿ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿರುವುದಾಗಿ ಸಚಿವರು ಹೇಳಿದ್ದಾರೆ.

ಕೃಷಿ ಪದವೀಧರರು 85% ಉಳಿದ 15% ಪೋಸ್ಟ್‌ಗಳನ್ನು ಬಿ.ಟೆಕ್ (ಕೃಷಿ ಎಂಜಿನಿಯರಿಂಗ್) ಅಥವಾ ಬಿ.ಟೆಕ್ (ಆಹಾರ ತಂತ್ರಜ್ಞಾನ/ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ ಬಯೋಟೆಕ್ನಾಲಜಿ ಹೊಂದಿರುವವರು ಅರ್ಹರಿರುತ್ತಾರೆ.

spot_img

Related News

ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ಧಿಡೀರ್ ದಾಳಿ

ಬೆಂಗಳೂರು : ರಾಜ್ಯದ ಆರ್ ಟಿಓ ಚೆಕ್ ಪೋಸ್ಟಗಳ ಮೇಲೆ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ವಾಹನ ಸವಾರರಿಂದ ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್...

ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ 1 ವರ್ಷ ಜೈಲು, 50 ಸಾವಿರ ದಂಡ

ನವದೆಹಲಿ: ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ ಭಾರತೀಯ ದೂರಸಂಪರ್ಕ ಮಸೂದೆ 2022 ರ ಸಿದ್ಧಪಡಿಸಿದ ಕರಡು ಪ್ರತಿಯ ಪ್ರಕಾರ, ನೀವು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ 50,000...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -