spot_img
spot_img
spot_img
24 C
Belagavi
Thursday, June 1, 2023
spot_img

ಕುಡಿದು ದೇವಸ್ಥಾನಕ್ಕೆ ಬಂದ ಅಯ್ಯಪ್ಪ ಮಾಲಾಧಾರಿಗೆ ಗುರುಸ್ವಾಮಿಯಿಂದ ಕಪಾಳಮೋಕ್ಷ 

ಹುಬ್ಬಳ್ಳಿ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಕಂಠ ಪೂರ್ತಿ ಕುಡಿದು ದೇವಸ್ಥಾನಕ್ಕೆ ಬಂದಿದ್ದ ಪಾನಮತ್ತ ಸ್ವಾಮಿಗೆ ಗೋಕುಲ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಪಾಳಮೋಕ್ಷ ಮಾಡಲಾಗಿದೆ.

ಗೋಕುಲದ ಮೋಹನ ಗುರುಸ್ವಾಮಿ ಅವರು ಕುಡಿದು ದೇವಸ್ಥಾನಕ್ಕೆ ಬಂದಿದ್ದ ಮಾಲಾಧಾರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದವರು ಕಠಿಣ ವೃತ್ತ ಮಾಡಬೇಕು.

ಆದರೆ ಇಲ್ಲೊಬ್ಬ ವ್ಯಕ್ತಿ ಮಾಲೆ ಧರಿಸಿ ಕುಡಿದು ಬಂದು ವ್ರತ ಭಂಗ ಮಾಡಿದ್ದ. ಆತನ ಸನಿಹಕ್ಕೆ ಹೋದರೆ ಮದ್ಯದ ವಾಸನೆ ಮೂಗು ಮುಚ್ಚುವಂತಿತ್ತು.

ಮದ್ಯ ಸೇವಿಸಿ ದೇವರ ಸನ್ನಿಧನಕ್ಕೆ ತೆರಳಿದ್ದ ವ್ಯಕ್ತಿ ಗುರು ಸ್ವಾಮಿ ಬಳಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಗುರುಸ್ವಾಮಿ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸ್ಥಳದಲ್ಲೇ ಅಯ್ಯಪ್ಪ ಮಾಲೆ ತೆಗೆಸಿದ್ದಾರೆ. ಕಪ್ಪುಬಟ್ಟೆಯನ್ನೂ ತೆಗೆದು ಕಟ್ಟಿಹಾಕುವಂತೆ ಸೂಚಿಸಿದ್ದಾರೆ.

Related News

ಶೆಟ್ಟರ್​, ಲಕ್ಷ್ಮಣ್ ಸವದಿ ನಮ್ಮ ನಾಯಕರು ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ

ಬೆಳಗಾವಿ: ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು...

ರಾಜ್ಯದ ವಿವಿದೆಡೆ ಲೋಕಾಯುಕ್ತ ದಾಳಿ

ಬೆಂಗಳೂರು:  ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮೇ 31) ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಮತ್ತೊಂದೆಡೆ ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ ತುಮಕೂರಿನ ಕೆಐಎಡಿಬಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -