ಮೈಸೂರು: ಇಂದು ನಾಡಿನೆಲ್ಲೆಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಮೈಸೂರು ಅರಮನೆಯಲ್ಲೂ ರಾಜ ಪರಂಪರೆ ಆಯುಧ ಪೂಜೆಯ ಕೈಂಕರ್ಯಗಳು ಆರಂಭವಾಗಿವೆ. ಬೆಳಗ್ಗೆ 5.30ಕ್ಕೆ ಚಂಡಿಹೋಮದೊಂದಿಗೆ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಿವೆ.
ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ. ಬೆಳಗ್ಗೆ 6 ಗಂಟೆ 5 ನಿಮಿಷದಿಂದ 6.15ಕ್ಕೆ ಅರಮನೆಯ ಕೋಡಿ ಸೋಮೇಶ್ವರ ದೇಗುಲಕ್ಕೆ ಖಾಸಾ ಆಯುಧಗಳು ರವಾನೆ ಮಾಡಲಾಗಿತ್ತು. ಬೆಳಗ್ಗೆ 7.15ಕ್ಕೆ ಖಾಸಾ ಆಯುಧಗಳು ದೇಗುಲದಿಂದ ಅರಮನೆಗೆ ವಾಪಸ್ ಆಗಿವೆ. ಬೆಳಗ್ಗೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ ಕಾರ್ಯಕ್ರಮ ನಡೆಯುತ್ತದೆ. ಬೆಳಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟಣದ ಆನೆ, ಕುದುರೆ, ಹಸು ಆಗಮಿಸುತ್ತವೆ. ಮಧ್ಯಾಹ್ನ 12.20ರಿಂದ ಮೈಸೂರು ಅರಮನೆಯಲ್ಲಿ ಆಯುಧಪೂಜೆ ಆರಂಭವಾಗುತ್ತದೆ. ಅರಮನೆಯಲ್ಲಿ ಮಧ್ಯಾಹ್ನ 12.45ರವರೆಗೆ ಆಯುಧಪೂಜೆ ನಡೆಯುತ್ತವೆ.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಪೂಜೆ ಮಾಡುತ್ತಾರೆ. ಸಂಜೆ ಖಾಸಗಿ ದರ್ಬಾರ್ ನಂತರ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡಲಾಗುತ್ತದೆ. ಬಳಿಕ ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ಕಾರ್ಯಕ್ರಮ ನಡೆಯುತ್ತದೆ. ಮಹಾಸನ್ನಿಧಾನದಲ್ಲಿ ಯದುವೀರರಿಂದ ಅಮಲದೇವಿ ದರ್ಶನ ಪಡೆಯುತ್ತಾರೆ. ಈ ಮೂಲಕ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮುಕ್ತಾಯಗೊಳ್ಳುತ್ತದೆ.
ಉತ್ತರಕಾಶಿಯ ಸಿಲ್ಕ್ಯಾರ್ ಸುರಂಗದಲ್ಲಿ 17 ದಿನಗಳ ಕಾಲ 41 ಕಾರ್ಮಿಕರು ಸಿಲ್ಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತೆಗೆದಿರುವ ಬೆಳಗಾವಿಯ ಹೆಮ್ಮೆಯ L&D ಕಂಪನಿಯ ಉದ್ಯೋಗಿ ಬಾಲಚಂದ್ರ ಕಿಲಾರಿ ದುಡಪಿ ಕೇದಾರ,ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು...
ಉತ್ತರಕಾಶಿಯ ಸಿಲ್ಕ್ಯಾರ್ ಸುರಂಗದಲ್ಲಿ 17 ದಿನಗಳ ಕಾಲ 41 ಕಾರ್ಮಿಕರು ಸಿಲ್ಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತೆಗೆದಿರುವ ಬೆಳಗಾವಿಯ ಹೆಮ್ಮೆಯ L&D ಕಂಪನಿಯ ಉದ್ಯೋಗಿ ಬಾಲಚಂದ್ರ ಕಿಲಾರಿ ದುಡಪಿ ಕೇದಾರ, ರಕ್ಷಣಾ ಕಾರ್ಯಾಚರಣೆಯಲ್ಲಿ...