spot_img
spot_img
spot_img
28.1 C
Belagavi
Thursday, September 29, 2022
spot_img

ಆಗಸ್ಟ್ 9 ದೇಶಕ್ಕೆ ಸ್ವಾತಂತ್ರ್ಯಕ್ಕೆ ಕಿಡಿ ಹಚ್ಚಿದ ದಿನ

spot_img

ವಿಶೇಷ ವರದಿ : ರತ್ನಾಕರ ಗೌಂಡಿ ಬೆಳಗಾವಿ

ನಾವು ಇಂದು 75ನೇಯ ಅಮೃತ ಸ್ವತಂತ್ರೋತ್ಸವಕ್ಕೆ ಕಾಲಿಡುತ್ತಿದ್ದೇವೆ. ಇದರ ಹಿಂದೆ ಅನೇಕ ಸ್ವತಂತ್ರ ಹೋರಾಟಗಾರರ ಬಲಿದಾನ ತ್ಯಾಗ ಇದೆ. ಅದರ ಜೊತೆ ಅಸಂಖ್ಯಾತ ಚಳುವಳಿಗಳು ಹೋರಾಟಗಳು ಸ್ವಾತಂತ್ರ್ಯ ಪಡೆಯಲು ಹೋರಾಟಗಾರರು ಮಾಡಿದ್ದಾರೆ.

ಆಗಸ್ಟ್ ತಿಂಗಳವನ್ನು ಕ್ರಾಂತಿ ದಿನವೆಂದು ಗುರುತಿಸಲಾಗಿದೆ ಆಗಸ್ಟ್ 9 ಸ್ವತಂತ್ರ ಹೋರಾಟದಲ್ಲಿ ವಿಶೇಷ ದಿನವಾಗಿದೆ.
ಮಾಡು ಇಲ್ಲವೇ ಮಡಿವೆ ಎಂಬ ಘೋಷಣೆ ಮೂಲಕ ಮುಂಬೈ ಗವಾಳಿ ಮೈದಾನದ ಈಗಿನ ಆಗಸ್ಟ್ ಕ್ರಾಂತಿ ಮೈದಾನ , ಮೈದಾನದಲ್ಲಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭಿಸಲಾಯಿತು.

ತಮ್ಮ ಐವತ್ತು ಜನರ ಬೆಂಬಲಿಗರೊಂದಿಗೆ ಮಹಾತ್ಮ ಗಾಂಧೀಜಿ ಚಳವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿಯ ಉದ್ದೇಶ, ಭಾರತವನ್ನು ಬ್ರಿಟಿಷರ ಆಡಳಿತದಿಂದ ಮುಕ್ತಗೊಳಿಸಿ ಸ್ವತಂತ್ರ ಪಡೆಯುವುದು ಇದರ ಉದ್ದೇಶವಾಗಿತ್ತು.

ಈ ಉದ್ದೇಶದಿಂದಾಗಿ 1942ರ ಆಗಸ್ಟ್ 8 ರಂದು ಗಾಂಧೀಜಿ ಅವರು ಕ್ವಿಟ್ ಇಂಡಿಯಾ ಚಳುವಳಿ ಅನ್ನು ಘೋಷಣೆ ಮಾಡಿದರು.ಆಗಸ್ಟ್ 9. 1942ರಂದು ಗಾಂಧೀಜಿ ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು.

ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಗಾಂಧೀಜಿಯವರನ್ನು ಪುಣೆಯಲ್ಲಿರುವ ಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿ ಇಡಲಾಯಿತು. ಗಾಂಧೀಜಿಯವರ ಗೃಹಬಂಧನದ ನಂತರ ಜಯಪ್ರಕಾಶ್ ನಾರಾಯಣ್, ರಾಮ ಮನೋಹರ ಲೋಹಿಯಾ, ಅರುಣ ಆಸಿಫ್ ಅಲಿ ,ಪ್ರಮುಖ ನಾಯಕರು ಈ ಚಳವಳಿಯನ್ನು ಮುಂದಾಳತ್ವ ವಹಿಸಿದರು.

ಚಳವಳಿಯ ತೀವ್ರತೆಯನ್ನು ಕಂಡ ಬ್ರಿಟಿಷ್ ಸರ್ಕಾರ ನಾಯಕರಗಳನ್ನು ಬಂಧನದಲ್ಲಿ ಇಡುತ್ತಾ ನಾಯಕರು ಗಳನ್ನು ಬಂದಿಸಿ ಚಳವಳಿಯನ್ನು ಹತ್ತಿಕ್ಕಲು ಪ್ರಾರಂಭಿಸಿದರು.
ಇದರಿಂದಾಗಿ ದೇಶದಲ್ಲಿ ಮೂಲೆ ಮೂಲೆಗಳಲ್ಲಿ ಜನರು ಸ್ವಯಂ ಪ್ರೇರಿತವಾಗಿ ಈ ಚಳವಳಿಯಲ್ಲಿ ದುಮಿಕಿದರು. ಅದರ ಭಾಗವಾಗಿ ಕರ್ನಾಟಕದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಅನೇಕ ಕಡೆ ಚಳುವಳಿ ಪ್ರಾರಂಭವಾಯಿತು.

ಅದರಲ್ಲಿ ಪ್ರಮುಖವಾಗಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರ ಗ್ರಾಮದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದು ಕೆಲ ಜನರನ್ನು ಜೀವಂತವಾಗಿ ಸುಟ್ಟ ಹಾಕಲಾಯಿತು.

ಇದರಿಂದಾಗಿ ಸ್ವತಂತ್ರ ಹೋರಾಟಗಾರರು ಮನೆಗಳಿಂದ ದೂರ ಕಾಡಿನಲ್ಲಿ ಕೆಲ ತಿಂಗಳ ಕಳೆಯಬೇಕಾಯಿತು. ಹೋರಾಟವನ್ನು ಮುಂದುವರಿಸಿ ನಂತರ ಶಿವಮೊಗ್ಗದ ಈಸೂರ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಪ್ರತ್ಯೇಕ ಧ್ವಜವನ್ನು ಹಾರಿಸಿ 1942 ಸೆಪ್ಟೆಂಬರ್ 27ರಂದು ಈಸೂರು ಗ್ರಾಮ ಸ್ವತಂತ್ರ ಗ್ರಾಮ ಎಂದು ಘೋಷಣೆ ಮಾಡಲಾಯಿತು.
ಹೋರಾಟದ ಕೆಣಕಿದ ಕಾರಣಕ್ಕಾಗಿ ಅಧಿಕಾರಿಗಳಿಗೆ ಗಾಂಧಿ ಟೋಪಿ ಧರಿಸಿ ಈಸೂರ ಗ್ರಾಮಕ್ಕೆ ಜೈ ಎಂದು ಘೋಷಣೆ ಕೂಗಿದರು.

ಇದಾದ ನಂತರ ಐದು ವರ್ಷಗಳ ನಂತರ 1947 ಆಗಸ್ಟ್ 15 ರ ಮಧ್ಯರಾತ್ರಿಯಲ್ಲಿ ಭಾರತ ದೇಶಕ್ಕೆ ಸ್ವತಂತ್ರ ಸಿಕ್ಕಿತು. ಈ ಅನೇಕ ಹೋರಾಟಗಳು ತೆರೆಮರೆಯಲ್ಲಿ ಸ್ವತಂತ್ರ ಹೋರಾಟಗಾರರು ಈ ದೇಶಕ್ಕೆ ತಮ್ಮ ಪ್ರಾಣವನ್ನು ನೀಡಿದ್ದಾರೆ.

ಸ್ವತಂತ್ರ ಸೇನೆಗಳಿಗೆ ಪಂಚಾಯತ್ ಸ್ವರಾಜ್ ಸಮಾಚಾರ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತದೆ.

spot_img

Related News

ಮೋದಿ ಅವರ ನೇತೃತ್ವದಲ್ಲಿ 150 ಸ್ಥಾನಗಳ ಗೆಲುವ ಪಣ : ಯಡಿಯೂರಪ್ಪ 

ಶಿವಮೊಗ್ಗ: ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ...

ತಾಳ್ಮೆ ಕಳೆದುಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ 

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ....

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -