Ad imageAd image

ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು: ರೌಡಿಶೀಟರ್​ನ ಹತ್ಯೆಗೆ ಯತ್ನ

ratnakar
ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು: ರೌಡಿಶೀಟರ್​ನ ಹತ್ಯೆಗೆ ಯತ್ನ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಬೆಳಗಾವಿ ತಾಲೂಕಿನ ಗಣೇಶಪುರದ ಹೊರವಲಯದಲ್ಲಿ ಅಪರಿಚಿತರು ರೌಡಿಶೀಟರ್ ಪ್ರಫುಲ್ ಪಾಟೀಲ್ ಮೇಲೆ ಫೈರಿಂಗ್ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ. ರೌಡಿಶೀಟರ್ ಪ್ರಫುಲ್​ ಪಾಟೀಲ್​ ಬೆಳಗುಂದಿ ಗ್ರಾಮದಿಂದ ಮನೆಗೆ ಹೋಗುವಾಗ ಅಪರಿಚಿತರು ಚಲಿಸುವ ಕಾರಿನ‌ ಮೇಲೆಯೇ ಫೈರಿಂಗ್ ಮಾಡಿದ್ದಾರೆ. ಇದರಿಂದ, ಗುಂಡು ಗಾಜಿಗೆ ತಗುಲಿದ್ದರಿಂದ ರೌಡಿಶೀಟರ್ ಪ್ರಫುಲ್ ಪಾಟೀಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಾರಿನ ಗಾಜುಗಳು ಚೂರುಗಳು ಚುಚ್ಚಿ ಪ್ರಫುಲ್ ಮುಖ ಮತ್ತು ತಲೆಭಾಗಕ್ಕೆ ಗಾಯವಾಗಿದೆ. ರೌಡಿಶೀಟರ್ ಪ್ರಫುಲ್​ ಪಾಟೀಲ್​ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆಸ್ಪತ್ರೆಗೆ ಗ್ರಾಮೀಣ ಠಾಣೆ ಎಸಿಪಿ ಗಂಗಾಧರ್, ಪಿಐ ಮತ್ತು ಅವರ ತಂಡ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದೆ.

ರೌಡಿಶೀಟರ್ ಪ್ರಫುಲ್​ ಪಾಟೀಲ್​ ಬೆಳಗುಂದಿ 2024 ಜೂನ್ 16ರಂದು ರಾಜು ಕಡೋಲ್ಕರ್ ಎಂಬಾತನ ಮೇಲೆ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ರೌಡಿಶೀಟರ್ ಪ್ರಫುಲ್ ಪಾಟೀಲ್​​ ಬಂಧನವಾಗಿದ್ದನು. ಬಳಿಕ ಪೊಲೀಸರು ಪ್ರಫುಲ್ ಪಾಟೀಲ್ ಮೇಲೆ ರೌಡಿಶೀಟರ್ ತೆರೆದು ಆರು ತಿಂಗಳು ಗಡಿ ಪಾರು ಮಾಡಿದ್ದರು. ಪ್ರಫುಲ್ ಪಾಟೀಲ್ ಮೇಲೆ ಪ್ರಕರಣಗಳು ದಾಖಲಾಗಿವೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಪ್ರಫುಲ್ ಪಾಟೀಲ್​ನನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

WhatsApp Group Join Now
Telegram Group Join Now
Share This Article