ರಾಜಸ್ಥಾನ: ಜೈಪುರದ ಫಾರ್ಮ್ ಹೌಸ್ ಒಂದರಲ್ಲಿ ಜೂಜಾಟ, ಅಶ್ಲೀಲ ಪಾರ್ಟಿ ಮೇಲೆ ಸೈಬರ್ ಕ್ರೈಂ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಕರ್ನಾಟಕದ ಕೆ ಎಎಸ್ ಅಧಿಕಾರಿ ಸಹಿತ 7 ಮಂದಿ ಬಂಧಿಸಲಾಗಿದೆ.
ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳಿದ್ದಂತ ಕೆ ಎಎಸ್ ಅಧಿಕಾರಿಗಳು ಸಹಿತ ಹಲವು ಅಧಿಕಾರಿಗಳು, ಜೂಜಾಟ, ಅಶ್ಲೀಲ ಪಾರ್ಟಿಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದಂತ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಕ್ಯಾಸಿನೋ ಪಾರ್ಟಿಯಲ್ಲಿ ತೊಡಗಿದ್ದಂತ ವೇಳೆಯಲ್ಲಿ ಕೆಎಎಸ್ ಅಧಿಕಾರಿ ಶ್ರೀನಾಥ್ ಸೇರಿದಂತೆ 7 ಮಂದಿಯನ್ನು, ಜೈಪುರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೆ ಎಎಸ್ ಅಧಿಕಾರಿ ಶ್ರೀನಾಥ್, ಕೋಲಾರದ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್ ಅಂಜಿನಪ್ಪ, ಕೋಲಾರ ನಗರಸಭೆಯ ಸದಸ್ಯ ಸತೀಶ್, ಶಿಕ್ಷಕ ರಮೇಶ್, ಆರ್ ಟಿಓ ಇಲಾಖೆ ಸಿಬ್ಬಂದಿ ಶಬರೀಶ್, ವ್ಯಾಪಾರಿ ಸುಧಾಕರ್ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಲಾಗಿದೆ.