ಶ್ರಾವಣ ಮಾಸದ ನಿಮಿತ್ತ ಶ್ರೀ ಭದ್ರಕಾಳಿ ಸಮೀತಿ ವೀರಭದ್ರೇಶ್ವರ ದೇವಸ್ಥಾನದ ವಿವಿಧ ಕಾರ್ಯಕ್ರಮ ಜರಗಿದವು. ವಿಶೇಷವಾಗಿ ರುದ್ರಾಭಿಷೇಕ ಪುಷ್ಪಾಲಂಕಾರ ಮಹಾಪ್ರಸಾದ ಮತ್ತು ಶ್ರಾವಣ್ ಮಾಸದ ನಿಮಿತ್ತವಾಗಿ ಪ್ರತಿ ಮಂಗಳವಾರ ಬೆಳಗ್ಗೆ 5.30 ರಿಂದ ರುದ್ರಾಭಿಷೇಕವನ್ನು ಜರುಗಿಸಲಾಗುತ್ತಿದೆ , ಮಹಾಪ್ರಸಾದ ಮತ್ತು ವಿವಿಧ ಪೂಂಜಾ ರಚನೆಯ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಶ್ರೀ ಭದ್ರಕಾಳಿ ಸಮಿತ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅರ್ಚಕರು ತಿಳಿಸಿದರು.
ಶ್ರೀ ಭದ್ರಕಾಳಿ ಶ್ರೀ ಸಮಿತ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಈರಯ್ಯ ಕೋತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿಯಲ್ಲಿ ವೀರಭದ್ರೇಶ್ವರ ದೇವಸ್ಥಾನ ಪೊಲೀಸ್ ಹೆಡ್ ಕ್ವಾರ್ಟರ್ ಪರಿಸರದಲ್ಲಿರುವ ದೇವಸ್ಥಾನ ಇದೆ ಅದನ್ನು ಹೊರತುಪಡಿಸಿದರೆ ಚೆನ್ನಬಸವೇಶ್ವರ ಬಡಾವಣೆ, ರಾಮ್ ತೀರ್ಪ್ ನಲ್ಲಿರುವ ಎರಡನೇ ದೇವಸ್ಥಾನ ಇದಾಗಿದೆ ಕಳೆದ ಎರಡು ವರ್ಷಗಳಿಂದಾಗಿ ಈ ಪರಿಸರವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.
ಮಂದಿರದ ಅನೇಕ ಕಾಮಗಾರಿಗಳು ಕೂಡ ಮಾಡಿದ್ದೇವೆ ಹಾಗೂ ಇನ್ನೂ ಮಾಡಬೇಕಾಗಿದೆ ಎಂದು ತಿಳಿಸಿದರು ಶ್ರೀ ಭದ್ರಕಾಳಿ ಸಮಿತ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ 17 ಸದಸ್ಯರ ಕಮಿಟಿ ಆಗಿದ್ದು ಅಧ್ಯಕ್ಷರಾಗಿ ಈರಯ್ಯ ಬಾ ಖೋತ್,
ಗೌರವ ಅಧ್ಯಕ್ಷರಾದ ಮಾರುತಿ ಕುರುಬೆಟ, ಕಾರ್ಯಧ್ಯಕ್ಷರಾದ
ಅರುಣ್ ಅ ನಂದಗಾವಿ,ಗಿರಿರಾಜ್ ಪಾಟೀಲ್ ಉಪಾಧ್ಯಕ್ಷರು ಬಸಪ್ಪ ಸಂಗಮನವರ್ ಕಾರ್ಯದರ್ಶಿ ಪ್ರಕಾಶ್ ಆರ್ ಕೌಜಲಗಿ, ಉಪ ಕಾರ್ಯದರ್ಶಿ, ಮಾರುತಿ ಹೊರಕೇರಿ, ಉಪ ಕಾರ್ಯದರ್ಶಿ, ಈರಪ್ಪ ಮರೆ ಹಾಗೂ ಖಜಾಂಗಿ ಸುರೇಶ್ ಬಾ ಪಾಟೀಲ್ ಪದಾಧಿಕಾರಿಗಳ ಮತ್ತು ಸದಸ್ಯರುಗಳು ದೇವಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.