Ad imageAd image

ಬೆಂಗ್ಳೂರು ಎಸಿಗಳು ಅಂದ್ರೆ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? – ಕೃಷ್ಣಭೈರೇಗೌಡ ತರಾಟೆ

ratnakar
ಬೆಂಗ್ಳೂರು ಎಸಿಗಳು ಅಂದ್ರೆ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? – ಕೃಷ್ಣಭೈರೇಗೌಡ ತರಾಟೆ
WhatsApp Group Join Now
Telegram Group Join Now

ಬೆಂಗಳೂರು: ಇಲ್ಲಿನ ಎಸಿಗಳು ಅಂದರೆ ಬರೀ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? ಎಂದು ಬೆಂಗಳೂರು ದಕ್ಷಿಣ ಎಸಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಚಳಿ ಬಿಡಿಸಿದರು.

ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಎಸಿ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸದೆ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಚರ್ಚಿಸಿದರು. ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳ ಉಪ-ವಿಭಾಧಿಕಾರಿಗಳು ಹಾಗೂ ವಲಯ ಆಯುಕ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಾನ್ಫರೆನ್ಸ್ನಲ್ಲಿ ಬೆಂಗಳೂರು ದಕ್ಷಿಣ ಎಸಿ ರಜನಿಕಾಂತ್ ವಿರುದ್ಧ ಮಾತನಾಡಿ, ನಿಮ್ಮ ವ್ಯಾಪ್ತಿಯಲ್ಲಿ ಬರುವ ಕೇಸ್ ಬಿಟ್ಟು ಬೇರೆ ವ್ಯಾಪ್ತಿಯ ಕೇಸ್ ಯಾಕೆ ತೆಗೆದುಕೊಂಡಿದ್ದೀರಾ? 66% ವ್ಯಾಪ್ತಿ ಮೀರಿ ಕೇಸ್ ತೆಗೆದುಕೊಳ್ಳುವ ಹಾಗಿಲ್ಲ. ಈ ಕೇಸ್ ತೆಗೆದುಕೊಳ್ಳಲು ಅವರ ಬಳಿ ಎಷ್ಟು ಹಣ ತೆಗೆದುಕೊಂಡಿದ್ದೀರಾ? ಒಳ ಒಪ್ಪಂದ ಎನಿದೆ? ಹಣ ಮಾಡೋಕೆ ಎಸಿ ಆಗಿದ್ದೀರಾ ಎಂದು ಕೆಂಡಾಮಂಡಲರಾಗಿ ಹಿಗ್ಗಾಮುಗ್ಗ ಜಾಡಿಸಿದರು.

ಬೆಂಗಳೂರು ಎಸಿಗಳು ಅಂದರೆ ಬರೀ ದುಡ್ಡು ಮಾಡೋಕೆ, ಬ್ಯುಸಿನೆಸ್ ಮಾಡೋಕೆ ಅಂದುಕೊಂಡಿದ್ದೀರಾ? ನಿಮ್ಮ ಕೆಲಸ ಬಗ್ಗೆ ಇಡೀ ದೇಶ ಮಾತಾಡುತ್ತಿದೆ. ನೀವೇನು ಕಾನೂನು ಒಳಗೆ ಇರೋರಾ? ಕಾನೂನುಗಿಂತ ಮೇಲೆ ಇರೋರಾ? ಎಂದು ಅಧಿಕಾರಿಯ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಮಧುಗಿರಿ ಎಸಿ ವಿರುದ್ಧವೂ ಸಚಿವರು ಗರಂ ಆಗಿ ಕಿವಿ ಮೇಲೆ ದಾಸವಾಳ ಹೂ ಕಾಣುತ್ತಿದೆಯಾ? ಮರ್ಯಾದೆ ಕೊಟ್ಟರೆ ಮರ್ಯಾದೆ ತಗೊಳ್ಳೋಕೆ ನಿಮಗೆ ಯೋಗ್ಯತೆಯಿಲ್ಲ ಅಂತಹ ಅಯೋಗ್ಯರು ನೀವು. ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದ್ರೆ ಜನರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ? ಎಂದು ಕಿಡಿ ಕಾರಿದರು.

ಕೋರ್ಟ್ ಕೇಸ್ ವಿಲೇವಾರಿ ಮಾಡದ ತುಮಕೂರು ಮಧುಗಿರಿ ಎಸಿ ಶಿವಪ್ಪ ಹಾಗೂ ಎಸಿ ಗೌರವ್ ಶೆಟ್ಟಿ ವಿರುದ್ಧವೂ ಕೆಂಡಾಮಂಡಲರಾದರು.

 

WhatsApp Group Join Now
Telegram Group Join Now
Share This Article