ಬೆಳಗಾವಿ: ಜೀವನದಲ್ಲಿ ಜೀಗುಪ್ಸೆ ಹೊಂದಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನ ಟ್ರಾಫಿಕ್ ಕಾನ್ಸ್‌ಸ್ಟೇಬಲ್ ರಕ್ಷಣೆ ಮಾಡಿರೋ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ 44 ವರ್ಷದ ಶಿವಲೀಲಾ ಪರ್ವತಗೌಡ್ರ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳೀಯರಿಂದ ಉತ್ತರ ಸಂಚಾರ ಠಾಣೆ ಪಿಸಿ ಕಾಶಿನಾಥ್ ಈರಿಗಾರ ಎಂಬವರಿಗೆ ವಿಷಯ ತಿಳೀತ್ತಿದ್ದಂತೆ ಕೆರೆಗೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಲೆಕ್‍ವ್ಯೂ ಆಸ್ಪತ್ರೆ ಪಾಯಿಂಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವಿಷಯ ತಿಳಿದಿದೆ. ಈ ವೇಳೆ 5 ಅಡಿ ಎತ್ತರದ ಬ್ಯಾರಿಕೇಡ್ ಮೇಲಿಂದ ಜಿಗಿದು ಮಹಿಳೆಯರ ಪ್ರಾಣ ಕಾಪಾಡಿದ್ದಾರೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದು 5 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.