ಬೆಳಗಾವಿ : ಉದ್ಯೋಗ ಖಾತರಿ ಯೋಜನೆಯಡಿ ಜಲ ಸಂಜೀವಿನಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ, ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಮಟ್ಟದಲ್ಲಿ ಜಲ ಸಂಜೀವಿನಿ ಜಿಲ್ಲಾ ಸಂಯೋಜಕರ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಷರತ್ತುಗಳು :
ಪದವಿಧರರಾಗಿರಬೇಕು. ಕೃಷಿ/ಜಲಾನಯನ ಅಭಿವೃದ್ದಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿಗಳು ಜಲಾನಯನ ಅಭಿವೃದ್ದಿ ಕಾರ್ಯಕ್ರಮಗಳ ಅನುಷ್ಠಾನದ ಕನಿಷ್ಠ 10 ವರ್ಷ ಅನುಭವ ಹೊಂದಿರಬೇಕು.
ಕನಿಷ್ಠ ಸಹಾಯಕ ಕೃಷಿ ನಿರ್ದೇಶಕ ಹುದ್ದೆಯಲ್ಲಿ ನಿವೃತ್ತಿ ಹೊಂದಿರುವ ಅಧಿಕಾರಿಗಳಾಗಿದ್ದು, ಜಿಲ್ಲಾ ಪಂಚಾಯತ ಹಾಗೂ ಇತರೆ ಅನುಷ್ಠಾನ ಇಲಾಖೆಗಳೊಡನೆ ಸಮನ್ವಯ ಸಾಧಿಸುವ ಸಾಮಥ್ರ್ಯ, ಸತತವಾಗಿ ಕ್ಷೇತ್ರ ಭೇಟಿ ಮಾಡುವ ಹಾಗೂ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವ ಸಾಮಥ್ರ್ಯ ಹೊಂದಿರಬೇಕು. ಗರಿಷ್ಠ 65 ವರ್ಷ ವಯೋಮಿತಿ ಮೀರಿರಬಾರದು.
Bsc (Aghriculture) Or B.Tech(Agriculture Engneering) ಪದವೀಧರರು, GUS ತಂತ್ರಾಂಶದ ಪರಿಣ ತಿ ಹೊಂದಿರಬೇಕು. ಸರ್ಕಾರೇತರ ಸಂಸ್ಥೆಗಳು/ಇತರೆ ಸಂಸ್ಥೆಗಳಲ್ಲಿ ಜಲಾನಯನ ಅಭಿವೃದ್ದಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು. ಸರ್ಕಾರೇತರ ಸಂಸ್ಥೆಗಳು/ಇತರೆ ಸಂಸ್ಥೆಗಳಲ್ಲಿ ಕನಿಷ್ಠ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರಬೇಕು.
ಜಲಾನಯನ ಪ್ರದೇಶದ ಅಭಿವೃದ್ದಿ ದೂರ ಸಂವೇದಿ ಮತ್ತು ಜಿಯೋಸ್ಪೇಷಲ್ ಆಧಾರಿತ ತಂತ್ರಜ್ಞಾನ ಬಳಕೆಯ ಅನುಭವ ಹಾಗೂ ಜಿಲ್ಲಾ ಪಂಚಾಯತ, ಇತರೆ ಅನುಷ್ಠಾನ ಇಲಾಖೆಗಳೊಡನೆ ಸಮನ್ವಯ ಸಾಧಿಸುವ ಸಾಮಥ್ರ್ಯ ಹೊಂದಿರಬೇಕು.
ಸತತವಾಗಿ ಕ್ಷೇತ್ರ ಬೇಟಿ ಮಾಡುವ ಹಾಗೂ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವ ಸಾಮಥ್ರ್ಯ ಹೊಂದಿರಬೇಕು ಹಾಗೂ ಗರಿಷ್ಠ 65 ವರ್ಷ ವಯೋಮಿತಿ ಮೀರಿರಬಾರದು.
ಕಾರ್ಯನಿರ್ವಹಿಸುವ ಅವಧಿ ಒಂದು ವರ್ಷಕ್ಕೆ ನಿಗದಿಪಡಿಸಲಾಗಿದೆ. (ಅವಶ್ಯಕತೆಗೆ ಅನುಗುಣವಾಗಿ ಇವರ ಸೇವಾ ಅವಧಿಯನ್ನು ವಿಸ್ತರಿಸಲಾಗುವದು) ಪ್ರತಿ ಮಾಹೆ ವೇತನ 50,000 ಮತ್ತು ರೂ.5000 ಪ್ರಯಾಣ ಮತ್ತು ಇತರೆ ಭತ್ತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ 0831-2499800 ಸಂಖ್ಯೆಯನ್ನು ಸಂಪಕಿಸಬಹುದು ಎಂದು ಬೆಳಗಾವಿಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.