ಬೆಳಗಾವಿ : 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳಾದ ನೀರು ಸಂಗ್ರಹಣಾ ಘಟಕ, ಸೋಲಾರ್ ಪಂಪ್‍ಗಳಿಗೆ ಸಹಾಯಧನ, ಮೋಹಕ ಕೀಟ ಬಲೆಗಳು/ಜಿಗುಟಾದ ಬಲೆಗಳ ಖರೀದಿಗೆ ಸಹಾಯಧನ, ಸೌರಶಕ್ತಿ ಆಧಾರಿತ ಕೀಟ ನಿಯಂತ್ರಣ ಬಲೆಗಳ ಖರೀದಿಗೆ, ನೀರಿನಲ್ಲಿ ಕರಗುವ ರಸಗೊಬ್ಬರಗಳ ಖರೀದಿಗೆ, ಲಘು ಪೋಷಕಾಂಶಗಳ ಮಿಶ್ರಣ ಖರೀದಿಗೆ, ಬೆಳೆ ಹೊದಿಕೆ, ತೋಟಗಾರಿಕೆ ಬೆಳೆಗಳ ಮೇಲಾವರಣ ನಿರ್ವಹಣೆಗೆ, ಕ್ಷೇತ್ರ ಮಟ್ಟದಲ್ಲಿ ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣೆ ಘಟಕ ನಿರ್ಮಾಣಕ್ಕೆ, ಕೊಯ್ಲೋತ್ತರ ನಂತರದ ಚಟುವಟಿಕೆಗಳಿಗೆ ಬಳಸುವ ಪ್ಲಾಸ್ಟಿಕ್ ಕ್ರೇಟ್ಸ್/ಪನೆಟ್ ಬಾಕ್ಸ್/ಕೋರುಗೇಟೆಡ್ ಬಾಕ್ಸ್‍ಸ್‍ಗಳ ಖರೀದಿಗೆ, ಸುರಂಗ ಮಾದರಿಯಲ್ಲಿ ಹಸಿರುಮನೆ ನಿರ್ಮಾಣಕ್ಕೆ ಸಹಾಯಧನ ಹಾಗೂ ತೋಟಗಾರಿಕೆ ಬೆಳೆಗಳ ಬೇಸಾಯದಲ್ಲಿ ಉಪಯೋಗಿಸುವ ಅನುಮೋದಿತ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಕಾರ್ಯಕ್ರಮಗಳು ಅನುಮೋದನೆಯಾಗಿರುತ್ತೆ.
ಆಸಕ್ತ ತೋಟಗಾರಿಕೆ ಬೆಳೆಗಾರರು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ ಅರ್ಜಿ ಸಲ್ಲಿಸುವಂತೆ ಬೆಳಗಾವಿಯ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.