ಬೆಳಗಾವಿ : 2022-23 ನೇ ಸಾಲಿಗೆ ಜಿಲ್ಲೆಯಲ್ಲಿನ ವಿಕಲಚೇತನರಿಗಾಗಿ ಇಲಾಖೆಯಡಿ ಆಧಾರ ಸ್ವಯಂ-ಉದ್ಯೋಗ ಯೋಜನೆಯಡಿ 18 ರಿಂದ 55 ವರ್ಷದ ವಯೋಮಿತಿಯ ವಿದ್ಯಾವಂತ ನಿರುದ್ಯೋಗಿ ವಿಕಲಚೇತನರಿಗಾಗಿ ಸ್ವಂತ ಉದ್ಯೋಗ ಮಾಡಲು ಗರಿಷ್ಠ 1.00 ಲಕ್ಷದ ವರೆಗೆ ಸಬ್ಸಿಡಿ ಸಹಿತ ಸಾಲವನ್ನು ಒದಗಿಸಲು ಜಿಲ್ಲೆಯ ವಿಕಲಚೇತನರಿಂದ ಮರು ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಆಸಕ್ತಿಯುಳ್ಳ ವಿಕಲಚೇತನರು ಸದರಿ ಯೋಜನೆಯ ಸೌಲಭ್ಯಕ್ಕಾಗಿ ಸೇವಾಸಿಂಧು ಪೋರ್ಟಲ್ ಮೂಲಕ ಜನವರಿ 15, 2023 ರ ವರೆಗೆ ಆನ್‍ಲೈನ್ ಅರ್ಜಿ ಸಲ್ಲಿಸಿ, ಸಂಬಂಧಪಟ್ಟ ತಾಲೂಕಿನ ತಾಲೂಕು ಪಂಚಾಯತ ಕಛೇರಿಯಲ್ಲಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಅರ್ಜಿ ಪ್ರತಿ ಸಲ್ಲಿಸಬಬೇಕು. ತಡವಾಗಿ ಬಂದಂತಹ ಅರ್ಜಿಗಳನ್ನು ಹಾಗೂ ಅಪೂರ್ಣ ಅರ್ಜಿಗಳು ಯಾವುದೇ ಕಾರಣಕ್ಕೂ ಪರಿಗಣ ಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಈ ಕಛೇರಿ ದೂರಾವಾಣ ಸಂಖ್ಯೆ: 0831-2476096/2476097 ಗೆ ಅಥವಾ ಆಯಾ ತಾಲೂಕುಗಳ ಎಂ.ಆರ್.ಡಬ್ಲ್ಯೂ. ಗಳನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ನಾಮದೇವ ಬಿಲ್ಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.