ಬೆಳಗಾವಿ: ಕೈಮಗ್ಗ ಮತ್ತು ಜವಳಿ ಇಲಾಖೆ, ವತಿಯಿಂದ 2022-23ನೇ ಸಾಲಿನ ಆಯವ್ಯಯದಲ್ಲಿ ‘’ನೇಕಾರಿಕೆ ಉದ್ದೇಶಕ್ಕಾಗಿ ಎದುರಿಸುತ್ತಿರುವ ಬಂಡವಾಳ ಕೊರತೆಯನ್ನು ನೀಗಿಸಲು ರಾಜ್ಯದ ನೇಕಾರರ ಸಹಕಾರ ಸಂಘಗಳು/ಪ್ರಾಥಮಿಕ ಕೃಷಿ ಪತ್ತಿನ ಸಂಘ/ಪತ್ತಿನ ಸಹಕಾರ ಸಂಘ/ಕೃಷಿಯೇತರ ಪತ್ತಿನ ಸಹಕಾರ ಸಂಘ/ಸಹಕಾರ ಬ್ಯಾಂಕ್ (ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಗಳು, ಪಟ್ಟಣ ಸಹಕಾರ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳು ಹಾಗೂ ಇತರೆ ಕೈಗಾರಿಕಾ ಸಹಕಾರ ಬ್ಯಾಂಕಗಳು) ಹಣಕಾಸಿನ ಸಂಸ್ಥೆಗಳು ಮತ್ತು ವಾಣ ಜ್ಯ ಬ್ಯಾಂಕುಗಳಿಂದ ಪಡೆಯುವ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಫಾವಧಿ ಸಾಲದ ಮೇಲೆ ಶೇ. 8 ರಷ್ಟು ಬಡ್ಡಿ ಸಹಾಯಧನವನ್ನು ರಾಜ್ಯ ಸರ್ಕಾರದಿಂದ ನೀಡುವ ಹೊಸ ಯೋಜನೆಯನ್ನು’’ ಘೋಷಿಸಲಾಗಿರುತ್ತದೆ.
ಆದ ಕಾರಣ ಕರ್ನಾಟಕ ರಾಜ್ಯದ ರಹವಾಸಿಗಳಾದ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿರುವ ಅರ್ಹ ಫಲಾನುಭವಿಗಳು ಈ ಕಛೇರಿಯಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ನಂತರ ಈ ಕಚೇರಿಯಿಂದ ಸ್ಥಳ ಪರಿಶೀಲನೆ ಜರುಗಿಸಿ ನೇಕಾರಿಕೆ ಉದ್ಯೋಗ ಮಾಡುತ್ತೀರುವ ಬಗ್ಗೆ ಖಾತರಿಸಿ ಪಡಿಸಿಕೊಂಡು ತಾವು ಸಾಲ ಪಡೆಯಲು ಇಚ್ಛೆಯನ್ನು ಹೊಂದಿರುವ ಸಹಕಾರ ಸಂಘ/ಬ್ಯಾಂಕು/ಹಣಕಾಸು ಸಂಸ್ಥೆ ಮತ್ತು ವಾಣ ಜ್ಯ ಬ್ಯಾಂಕುಗಳಿಗೆ ಅರ್ಜಿದಾರರ ಸಾಲದ ಅರ್ಜಿಗಳನ್ನು ಶಿಫಾರಸ್ಸು ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.