ಬೆಳಗಾವಿ : ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಉಚಿತವಾಗಿ 18-35 ವಯಸ್ಸಿನ ಯುವಕ/ಯುವತಿಯರಿಗೆ ಹೌಸ್ ವೈರಿಂಗ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು :
SSLC / PUC ವಿದ್ಯಾರ್ಹತೆ ಪ್ರಮಾಣ ಪತ್ರ, ಆದಾರ ಕಾರ್ಡ, 3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 4. ಅಭ್ಯರ್ಥಿಯ ಫೋಟೊ ಎಲ್ಲವು ತಲಾ ಒಂದು ಝರಾಕ್ಸ ಪ್ರತಿ ಸಲ್ಲಿಸಬೇಕು.
ಆಸಕ್ತ ಅಭ್ಯರ್ಥಿಗಳು ಜನೇವರಿ 9 ರೊಳಗಾಗಿ ತಮ್ಮ ಹೆಸರನ್ನು ಆದರ್ಶ ಐ.ಟಿ.ಐ, ಪ್ಲೊಟ ನಂ : 508, ಆಟೋ ನಗರ ಇಲ್ಲಿಗೆ ನೊಂದಾಯಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9964201363, 8867201363 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.