ಬೆಳಗಾವಿ : 2022-23ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಆರ್ಥಿಕ ನೆರವು ಕಾರ್ಯಕ್ರಮ ಪ್ರಾರಂಭಗೊಂಡಿದ್ದು, ಬೆಳಗಾವಿ ಜಿಲ್ಲೆಗೆ 102 ಘಟಕ (ಒಂದು ಮಿಶ್ರ ತಳಿ ಹಸು/ಸುಧಾರಿತ ತಳಿ ಎಮ್ಮೆ) ಹಾಗೂ 69 ಘಟಕ (ಕುರಿ/ಮೇಕೆ) ಸ್ಥಾಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಘಟಕದ ವೆಚ್ಚ ರೂ. 60,000 ರಲ್ಲಿ 90% ರಷ್ಟು ಸಹಾಯಧನದ ಮೊತ್ತ ರೂ. 54,000 ಗಳಲ್ಲಿ ಒಂದು ಮಿಶ್ರ ತಳಿ ಹಸು/ಸುಧಾರಿತ ತಳಿ ಎಮ್ಮೆ ಘಟಕ ಖರೀದಿಸಲು ಅವಕಾಶ ಇರುತ್ತದೆ.
ಅದೇ ರೀತಿಯಲ್ಲಿ ಕುರಿ/ಮೇಕೆ (10+1) ಘಟಕವನ್ನು ಸ್ಥಾಪಿಸಿ ಖರೀದಿಸಲು ಘಟಕದ ಒಟ್ಟು ವೆಚ್ಚ ರೂ. 60,000 ಗಳಿದ್ದು, ಅದರಲ್ಲಿ 90% ರಷ್ಟು ಸಹಾಯಧನದ ಮೊತ್ತ ರೂ. 54,000 ಗಳಲ್ಲಿ ಕುರಿ/ಮೇಕೆ (10+1) ಘಟಕ ಸ್ಥಾಪಿಸಲು ಅವಕಾಶ ಇರುವುದರಿಂದ ರಾಷ್ಟ್ರೀಕೃತ ಬ್ಯಾಂಕ್ಗಳು, ವಾಣ ಜ್ಯ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಮುಖಾಂತರ ರೂ. 6,000 ಗಳ ಸಾಲ ಮಂಜೂರಾತಿಯೊಂದಿಗೆ ಅನುಷ್ಠಾನಗೊಳಿಸುವುದಾಗಿರುತ್ತದೆ. ರೈತ ಬಾಂಧವರನ್ನು ಹೈನೋದ್ಯಮದಲ್ಲಿ ಆರ್ಥಿಕ ಸಬಲರನ್ನಾಗಿ ಮಾಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿರುತ್ತದೆ.
ಆದ್ದರಿಂದ ಜಿಲ್ಲೆಯ ಅರ್ಹ ರೈತ ಫಲಾನುಭವಿಗಳು ತಮ್ಮ ತಮ್ಮ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಛೇರಿಗಳಿಗೆ ಬೇಟಿ ನೀಡಿ ಅರ್ಜಿಗಳನ್ನು ಪಡೆದು ಸರ್ಕಾರದ ಮಾರ್ಗಸೂಚಿಯನ್ವಯ ಪೂರ್ತಿಯಾಗಿ ಭರ್ತಿಮಾಡಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನವಾಗಿರುತ್ತದೆ.