spot_img
spot_img
spot_img
34.1 C
Belagavi
Wednesday, June 7, 2023
spot_img

ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಬೆಳಗಾವಿ : ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಬೆಳಗಾವಿ ಇವರು ಬೆಳಗಾವಿ ಜಿಲ್ಲೆಗಾಗಿ 2022-23 ನೇ ಸಾಲಿಗಾಗಿ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಯುವ ಮಂಡಳಗಳು ಕರ್ನಾಟಕ ಸಂಘ ಸಂಸ್ಥೆಗಳ ಕಾಯ್ದೆ 1960 ರ ಅಡಿಯಲ್ಲಿ ನೋಂದಣ ಯಾಗಿರಬೇಕು ಮತ್ತು ನೆಹರು ಯುವ ಕೇಂದ್ರ ಬೆಳಗಾವಿ ಕಛೇರಿಯಲ್ಲಿ ಸಂಯೋಜನೆಗೊಂಡಿರಬೇಕು. ಹಾಗೂ ದಿನಾಂಕ: 01-04-2021 ರಿಂದ 31-03-2022 ರ ಅವಧಿಯಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಮಾಡಿರಬೇಕು.

ಅಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪರಿಸರ ಸೌಂರಕ್ಷಣೆ, ವೃತ್ತಿ ತರಬೇತಿ, ಸಾಕ್ಷರತೆ, ಮಹಿಳಾ ಸಬಲೀಕರಣ ಸಾಂಸ್ಕøತಿಕ ಕಾರ್ಯಕ್ರಮ, ಸ್ವಯಂ ಉದ್ಯೋಗ, ಸಾಮಾಜಿಕ ಪಿಡುಗುಗಳು, ಕ್ರೀಡೆಗಳು ಹಾಗೂ ಸಮಾಜ ಕಲ್ಯಾಣಗಳ ಬಗ್ಗೆ ಯುವ ಮಂಡಳಗಳು ಕೆಲಸ ಮಾಡಿರಬೇಕು.ಈ ಕುರಿತು ಸಂಬಂಧಿಸಿದ ದಾಖಲೆಗಳು ಇರಬೇಕು.

ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿ ರೂ.25,000 ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಬೆಳಗಾವಿ ಜಿಲ್ಲೆಯ ಆಸಕ್ತ ಹಾಗೂ ಅರ್ಹ ಯುವಕ/ತಿ/ಮಹಿಳಾ ಮಂಡಳಗಳು ಜಿಲ್ಲಾ ಯುವ ಅಧಿಕಾರಿಗಳು ನೆಹರು ಯುವ ಕೇಂದ್ರ, ಅನ್ನಪೂರ್ಣ ನಿಲಯ, 1ನೇ ಕ್ರಾಸ್ ಮಹಾಂತೇಶ ನಗರ ಬೆಳಗಾವಿಯಲ್ಲಿ ನಿಗದಿತ ಅರ್ಜಿ ನಮೂನೆಗಳನ್ನು ಪಡೆಯಬಹುದು.

ಪೂರ್ಣವಾದ ಅರ್ಜಿಗಳನ್ನು ಪ್ರಸ್ತಾವಣೆಯೊಂದಿಗೆ ಅಗತ್ಯ ದಾಖಲಾತಿಗಳು ಸೇರಿದಂತೆ 2021-22ರ ಅಡಿಟ್ ರಿಪೋರ್ಟ ಇರಬೇಕು. ರಿನಿವಲ್ ಪ್ರಮಾಣ ಪತ್ರ ಹೊಂದಿರಬೇಕು, ಪೇಪರ್ ಕಟಿಂಗ್ ಪ್ರಮಾಣ ಪತ್ರಗಳು, ಕಾರ್ಯಕ್ರಮದ ಫೋಟೋ ಇತ್ಯಾದಿಗಳನ್ನು ಲಗತ್ತಿಸಿ ದಿನಾಂಕ ಡಿಸೆಂಬರ್ 10ರ ಒಳಗಾಗಿ ನೆಹರು ಯುವ ಕೇಂದ್ರ, ಬೆಳಗಾವಿ ಸಿ,ಟಿ,ಎಸ್, ನಂ:9663 ಪ್ಲಾಟ್ ನಂ : 2367 ಅಣ್ಣಪೂರ್ಣ ನಿಲಯ, 1ನೇ ಕ್ರಾಸ್, ಮಹಾಂತೇಶ ನಗರ, ಬೆಳಗಾವಿ ಈ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0831-2453496 ಗೆ ಸಂಪರ್ಕಿಸಬಹುದು ಬೆಳಗಾವಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ರೋಹಿತ ಕಲರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

ತಿಂಗಳ ಸರಾಸರಿ ಮೀರಿದ್ರೆ ಹೆಚ್ಚುವರಿ ಯೂನಿಟ್‌ನ ಹಣ ಕಟ್ಟಬೇಕು: ಕೆಜೆ ಜಾರ್ಜ್

ಈಗಾಗಲೇ ಸಿಎಂ ಗೃಹಜ್ಯೋತಿ ಯೋಜನೆ ಬಗ್ಗೆ ವಿಸ್ಕೃತವಾಗಿ ತಿಳಿಸಿದ್ದಾರೆ. 200 ಯೂನಿಟ್ ವರೆಗೆ ಪ್ರತಿಯೊಬ್ಬರಿಗೆ ಉಚಿತವಾಗಿ ವಿದ್ಯುತ್ ಕೊಡುವ ಯೋಜನೆ ಇದಾಗಿದೆ. ಗೃಹಬಳಕೆಯ ಗ್ರಾಹಕರ ಒಂದು ವರ್ಷದ ಸರಾಸರಿ ತೆಗೆದುಕೊಂಡು 10% ಸೇರಿಸಿ...

ಮಾಜಿ ಮಧ್ಯಮ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಹಾಗೂ ಅವರ ಧರ್ಮಪತ್ನಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕಸ್ಮಿಕ ಬೇಟಿ ಉಭಯ ಕುಶಲೋಪರಿ ವಿಚಾರಣೆ

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಮಧ್ಯಮ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಹಾಗೂ ಅವರ ಧರ್ಮಪತ್ನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -