spot_img
spot_img
spot_img
spot_img
spot_img
spot_img
spot_img
spot_img
spot_img
20.4 C
Belagavi
Sunday, September 24, 2023
spot_img

ಬೆಳಗಾವಿ : ಬ್ಯೂಟಿ ಪಾರ್ಲರ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಬೆಳಗಾವಿ : ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ಬೆಳಗಾವಿಯಲ್ಲಿ, ಬೆಳಗಾವಿ ಜಿಲ್ಲೆಯ ಗ್ರಾಮೀಣ ಮಹಿಳೆಯರಿಗೆ, ನಿರುದ್ಯೋಗಿಗಳಿಗೆ ಮೇ 25 ರಿಂದ ಜೂನ್ 23ರವರೆಗೆ 30 ದಿನಗಳ ಬ್ಯೂಟಿ ಪಾರ್ಲರ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಭಾಗವಹಿಸಲಿರುವ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದು, 18 ರಿಂದ 45 ವರ್ಷದ ವಯೋಮಿತಿಯಲ್ಲಿರಬೇಕು. ತರಬೇತಿ ಪಡೆದ ನಂತರ ಸ್ವ ಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿದೆ.

ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು, ಬಿಳಿ ಹಾಳೆಯ ಮೇಲೆ ಅಥವಾ ನಮ್ಮ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ವಿಳಾಸ, ವಿದ್ಯಾಭ್ಯಾಸ, ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೋತೆಗೆ ಬಿಪಿಎಲ್ ರೇಶನ್ ಕಾರ್ಡ್, ಆಧಾರ ಕಾರ್ಡ, ಬ್ಯಾಂಕ ಪಾಸಬುಕ್ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಮೇ.24 ರೊಳಗಾಗಿ ಸಂಸ್ಥೆಗೆ ತಲುಪುವಂತೆ ಕಳಿಸಲು ಸೂಚಿಸಲಾಗಿದೆ.

ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‍ಸೆಟಿ), ಪ್ಲಾಟ ನಂ. ಸಿ ಎ -03 (ಪಾರ್ಟ) ಕಣಬರ್ಗಿ ಇಂಡಸ್ತ್ರಿಯಲ್ ಎರಿಯಾ, ಆಟೋ ನಗರ. ಬೆಳಗಾವಿ. ದೂರವಾಣ ಸಂಖ್ಯೆ 0831-2440644, 9845750043, 8296792166, 8867388906 ಇವರನ್ನು ಸಂಪರ್ಕಿಸಬಹುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

Related News

ರೈತರ ಹೋರಾಟಕ್ಕೆ ಸಾಂಕೇತಿಕವಾಗಿ ಬೆಂಬಲ ಸೂಚಿಸಲು ಹೊರಟಿದ್ದೇನೆ -ಹೆಚ್​ಡಿಕೆ

ಬೆಂಗಳೂರಿಗೆ ಆಗಮಿಸಿದ ಹೆಚ್​ಡಿ ಕುಮಾರಸ್ವಾಮಿ ಅವರು ಕೇಂಪೇಗೌಡ ಏರ್ಪೋರ್ಟ್ ನಲ್ಲಿ ಮಾತನಾಡಿದರು. ಈ ವೇಳೆ, ಅಮಿತ್ ಷಾ ಹಾಗೂ ನಡ್ಡಾ ಜೊತೆ ನಡೆದ ಚರ್ಚೆಗಳ ಬಗ್ಗೆ ದೆಹಲಿಯಲ್ಲಿ ಹೇಳಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ...

9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ

ಬೆಂಗಳೂರು: 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. 9ನೇ ತರಗತಿ ಮಕ್ಕಳ ಕಲಿಕಾ ದೃಷ್ಟಿಯಿಂದ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ ನಡೆಸಲು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -