ಅಲಿಗಢ: ಬ್ಯೂಟಿಪಾರ್ಲರ್ಗೆ ಹೋಗಲು ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಪತ್ನಿ ವಿಚ್ಛೇದನ ಕೇಳಿದ ಅಚ್ಚರಿಯ ಘಟನೆಯೊಂದು ಇಲ್ಲಿ ನಡೆದಿದೆ. ಅಲಿಗಢದ ಸಿವಿಲ್ ಲೈನ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿಚ್ಛೇದನ ಕೋರಿ ಪ್ರಥಮ ಎಡಿಜೆ ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರ ಮನವೊಲಿಸಲು ನ್ಯಾಯಾಲಯದ ಸಲಹೆಗಾರರು ಪ್ರಯತ್ನಿಸುತ್ತಿದ್ದರೂ ಹೆಂಡತಿ ತನ್ನ ಪತಿಯೊಂದಿಗೆ ವಾಸಿಸಲು ಸಿದ್ಧವಾಗಿಲ್ಲ.
25 ವರ್ಷದ ಮಹಿಳೆ ದೆಹಲಿ ನಿವಾಸಿ ಅಮಿತ್ ಅವರನ್ನು 2015 ರಲ್ಲಿ ವಿವಾಹವಾಗಿದ್ದರು. ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವರ್ಷಗಳ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತು. ಅದಾದ ನಂತರ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ದಂಪತಿಗೆ ಮಕ್ಕಳಿಲ್ಲ. ಇದೀಗ ಖರ್ಚಿಗಾಗಿ ಪತ್ನಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಪತಿ ಮೇಕಪ್ ಮತ್ತು ಇತರ ಮನೆಯ ಖರ್ಚಿಗೆ ಹಣ ನೀಡುವುದಿಲ್ಲ ಎಂದು ಪತ್ನಿ ಆರೋಪಿಸಿದ್ದಾರೆ.
ಗಂಡ ಮತ್ತು ಹೆಂಡತಿ ಒಟ್ಟಿಗೆ ವಾಸಿಸಲು ಸಿದ್ಧರಿಲ್ಲ. ಇಬ್ಬರೂ 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈಗ ಇಬ್ಬರ ಕೌನ್ಸೆಲಿಂಗ್ ಜನವರಿ ತಿಂಗಳಲ್ಲಿ ನಡೆಯಲಿದೆ.