spot_img
spot_img
spot_img
21.1 C
Belagavi
Friday, September 30, 2022
spot_img

ಕಿವುಡ ಮಕ್ಕಳ ವಸತಿ ಶಾಲೆಯ ಪ್ರವೇಶಕ್ಕೆ ಅರ್ಜಿ ಆಹ್ವಾನ

spot_img

ಬೆಳಗಾವಿ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿಯಲ್ಲಿ ಅಜಮ ನಗರದ ವಿದ್ಯಾಗಿರಿಯಲ್ಲಿ ನಡೆಸಲಾಗುತ್ತಿರುವ ಕಿವುಡ ಮಕ್ಕಳ ಸರಕಾರಿ ವಸತಿಯುತ ವಿಶೇಷ ಶಾಲೆಗೆ 2022-23 ನೇ ಸಾಲಿಗೆ ಒಂದನೇ ತರಗತಿಯಿಂದ ಹತ್ತನೇ ತರಗತಿವರಗೆ ಪ್ರವೇಶಗಳು ಪ್ರಾರಂಭವಾಗಿವೆ.

ಉಚಿತ ಊಟ ವಸತಿ, ಪಠ್ಯಪುಸ್ತಕ, ಪ್ರತ್ಯೇಕ ಸುರಕ್ಷಿತ ವಸತಿ ಗೃಹ (ಹಾಸ್ಟೆಲ್) ಹಾಗೂ ಸುಂದರ ಶಾಲಾ ಕಟ್ಟಡ ಇದ್ದು, ಮಕ್ಕಳಿಗೆ ಸ್ನಾನಕ್ಕಾಗಿ ಬಿಸಿ ನೀರಿನ (ಸೊಲಾರ ವಾಟರ ಹಿಟರ ) ವ್ಯವಸ್ಥೆ ಇದ್ದು 24 ಗಂಟೆಗಳ ನೀರು ಪೂರೈಕೆಯ ಸಂಪರ್ಕವನ್ನು ಹೊಂದಿದೆ. ಸಾಮಾನ್ಯ ಶಿಕ್ಷಣದ ಜೊತೆಗೆ ವ್ಯಾಯಾಮ, ಕ್ರೀಡೆ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ನುರಿತ ವಿಶೇಷ ಶಿಕ್ಷಕರಿಂದ ಸಂಜ್ಞಾ ಭಾಷೆಯೊಂದಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಆಸಕ್ತ ಪಾಲಕರು ಮಕ್ಕಳ ವಿಕಲಚೇತನ ವೈದ್ಯಕೀಯ ಪ್ರಮಾಣ ಪತ್ರ (ಯುಡಿಐಡಿ ಕಾರ್ಡ) ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರ, ಭಾವಚಿತ್ರ ಹಾಗೂ ಆಧಾರಕಾರ್ಡ ದಾಖಲಾತಿಗಳೊಂದಿಗೆ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣ ಸಂಖ್ಯೆ: 0831-2472250 ಹಾಗೂ ಅಧೀಕ್ಷಕರು, ಕಿವುಡ ಮಕ್ಕಳ ಸರಕಾರಿ ಶಾಲೆ, ಅಜಮ ನಗರ, 1 ನೇ ಅಡ್ಡ ರಸ್ತೆ ವಿದ್ಯಾಗಿರಿ, ಬೆಳಗಾವಿ ಇವರನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 8548055239/ 9449442212 ಸಂಪರ್ಕಿಸಬಹುದು ಎಂದು ಕಿವುಡ ಮಕ್ಕಳ ಸರಕಾರಿ ಶಾಲೆಯ ಪ್ರಭಾರ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img

Related News

ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ 1 ವರ್ಷ ಜೈಲು, 50 ಸಾವಿರ ದಂಡ

ನವದೆಹಲಿ: ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ ಭಾರತೀಯ ದೂರಸಂಪರ್ಕ ಮಸೂದೆ 2022 ರ ಸಿದ್ಧಪಡಿಸಿದ ಕರಡು ಪ್ರತಿಯ ಪ್ರಕಾರ, ನೀವು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ 50,000...

ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ : ಚನ್ನರಾಜ ಹಟ್ಟಿಹೊಳಿ

ಬೆಳಗಾವಿ : ಕಳೆದ ನಾಲ್ಕೂವರೆ ವರ್ಷದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಇನ್ನಷ್ಟು ವೇಗ ಪಡೆಯಲಿದೆ ಎಂದು ವಿಧಾನ ಪರಿಷತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -