ಬೆಳಗಾವಿ: ಬೆಳೆ ಸಮೀಕ್ಷೆ ಪಿ.ಆರ್ ಗಳನ್ನು ಖಾಯಂಗೊಳಿಸಬೇಕು ಮತ್ತು ಬಾಕಿ ಉಳಿದಿರುವ ಗೌರವಧನವನ್ನು ಕೂಡಲೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬೆಳೆ ಸಮೀಕ್ಷೆಗಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಅವರು ಬೇಸಿಗೆ ಬೆಳೆ ಸಮೀಕ್ಷೆ 2023ಪಿ ಆರ್ ಗಳ ಗೌರವಧನ ಪಾವತಿ ವಿಳಂಬದ ಕುರಿತು ಸರ್ಕಾರದ ಪರವಾಗಿ ರೈತರ ಬೆಳೆದ ಬೆಳೆಗಳು ಮಾಹಿತಿಯನ್ನು ಪಿ ಆರ್ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು 2018-19 ಮುಂಗಾರು ಹಂಗಾಮಿನಿಂದ ಮಾಡುತ್ತಾ ಬಂದಿದ್ದೇವೆ ,ಸದರೆ ಬೆಳೆ ಸಮೀಕ್ಷೆ ನಿರಂತರ ಕಾರ್ಯಕ್ರಮವಾಗಿದ್ದು ಪಿ ಯಾರ್ ಗಳು 2023 ಬೇಸಿಗೆ ಹಂಗಾಮಿ ಬೆಳೆ ಸಮೀಕ್ಷೆಯನ್ನು ಕಳೆದ ಏಪ್ರಿಲ್, ಮೇ ನಲ್ಲಿ ಪೂರ್ಣಗೊಳಿಸಿದ್ದೇವೆ. ಬೇಸಿಗೆ ಬೆಳೆ ಸಮೀಕ್ಷೆ 2023 ಪೂರ್ಣಗೊಂಡಿದ್ದು ಈಗ ಮುಂಗಾರು ಬೆಳೆ ಸಮೀಕ್ಷೆ 2023 24 ಶುರುವಾಗಿದೆ ಇಷ್ಟಾದರೂ ನಮಗೆ ಬೇಸಿಗೆ ಹಂಗಾಮಿ ಗೌರವ ಧನ ಪಾವತಿ ಆಗದೇ ಇರುವುದು ಕುರಿತಾಗಿ ತಾಲೂಕ ಅಧಿಕಾರಿಗಳಿಗೆ ಕೃಷಿ ಅಧಿಕಾರಿಗಳಿಗೆ ಗ್ರಾಮಮಟ್ಟದ ಅಧಿಕಾರಿಗಳಿಗೆ ಗೌರವಧನ ಕುರಿತಾಗಿ ವಾಟ್ಸಾಪ್ ಮತ್ತು ಮೌಖಿಕವಾಗಿ ತಿಳಿಸಿರುತ್ತೇವೆ.
ಬೆಳೆ ಸಮೀಕ್ಷೆ ಕಾರ್ಯವು ಹಂಗಾಮಿ ಆಧಾರಿತವಾಗಿದ್ದು ಪ್ರತಿ ಹಂಗಾಮಿನ ನಡುವೆ ಮೂರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅಂತರ ಇರುವುದರಿಂದ ಪ್ರತಿಯೊಂದು ಕಾರ್ಯ ಮುಗಿದ ನಂತರದಲ್ಲಿ ಪಿ ಆರ.ಗಳು ಕೃಷಿ ಇಲಾಖೆ ಕಂದಾಯ ಇಲಾಖೆಯಲ್ಲಿ ನಿರಂತರ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಇದರಿಂದಾಗಿ ನಮಗೆ ಪೂರ್ಣ ಪ್ರಮಾಣದ ಉದ್ಯೋಗ ಅವಕಾಶ ವಾಗಿರುವುದರಿಂದ ಖಾಯಂ ಮಾಡಿಕೊಳ್ಳಬೇಕು.
ಪಿ ಆರ್ ಹೊಲಗದ್ದೆಗಳಲ್ಲಿ ಬೆಳೆ ಸಮೀಕ್ಷೆ ಮಾಡುವಾಗ ವಿದ್ಯುತ್ತಂತೆ ಹಾಗೂ ವಿಶೇಷ ಸರಪಗಳಿಂದ ಜೀವಕ್ಕೆ ಅಪಾಯವಿರುತ್ತದೆ. ಆದ್ದರಿಂದ ನಮಗೆ ಸುರಕ್ಷಿತ ದೃಷ್ಟಿಯಿಂದ ಕೆಲವು ಉಪಕರಣಗಳನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಮಂಜುನಾಥ್ ಕೊಟುರ ಶಿವರಾಮ್ ಬಸಿಡೊಣಿ, ನಾಗಪ್ಪ ಕುರುಬರ , ಚೆನ್ನಪ್ಪ ಸತ್ತಿಗೇರಿ, ಬಸವರಾಜ್ ನೇಸರಗಿ, ಬಸವರಾಜ್ ಹಟ್ಟಿ , ಶಿವ ಮದರ್, ನಾಗಪ್ಪ ಬಸಪ್ಪ ಹುಣಸಿಕಟ್ಟಿ ,ಸಂತೋಷ್ ಕುರಿ, ರಾಯಗೌಡ ಪಾಟೀಲ್, ನಜೀರ್ ಸಾಬ್ ನದಾಫ್, ಸಂಗಮೇಶ್ವರ್ ಬನ ಕಟ್ಟಿ, ಬಸವರಾಜ್ ಕಳಗೇರಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು