Ad imageAd image

ಖಾನಾಪುರ್ ಅತಿವೃಷ್ಟಿ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್

ratnakar
By ratnakar 1
ಖಾನಾಪುರ್ ಅತಿವೃಷ್ಟಿ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್
WhatsApp Group Join Now
Telegram Group Join Now

ಖಾನಾಪುರ: ತಾಲೂಕಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ತೊಂದ್ರೆಗೆಡಾದ ಗ್ರಾಮಗಳಿಗೆ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ನಾಯಕಿ ಡಾ. ಅಂಜಲಿ ನಿಂಬಾಳ್ಕರ್ ಮಂಗಳವಾರ ಬಿಡಿ ಗ್ರಾಮ ಪಂಚಾಯತ್ ಗೋಲಿ ಹಳ್ಳಿ ಮತ್ತು ಹೊಸಟ್ಟಿ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಳೆಯಿಂದ ಬಿದ್ದಿರುವ ಮನೆಗಳು ವೀಕ್ಷಿಸಿ ಸರಕಾರದಿಂದ ಶೀಘ್ರದಲ್ಲಿ ಪರಿಹಾರ ಹಾಗೂ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು ಖಾನಾಪುರ ತಾಲೂಕಿನಲ್ಲಿ ಇವರಿಗೆ ಮಳೆಯಿಂದಾಗಿ 201 ಮನೆಗಳು ಅದರಲ್ಲಿ 39 ಮನೆಗಳು ಪೂರ್ಣ ಬಿದ್ದಿವೆ ಅತಿವೃಷ್ಟಿಯಿಂದಾಗಿ ತೊಂದರೆಗೊಳಗಾದ ಕುಟುಂಬಗಳಿಗೆ ಸರ್ಕಾರ1.20 ಲಕ್ಷ ರೂ ಪರಿಹಾರ ನೀಡಲಾಗುವುದು ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರು ಮಾಡಲಾಗುವುದು ಎಸ್ಸಿ ಎಸ್ಟಿ ಸಮುದಾಯದವರ ಮನೆಗಳ ಬಿದ್ದಿದೆ ಅವರಿಗೆ 1.50 ಲಕ್ಷ ರೂ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಖಾನಾಪುರ ಪಟ್ಟಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯನ್ನು ಅತಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಹಾಗೂ ಅರಣ್ಯ ಮಧ್ಯದಲ್ಲಿರುವ ಗ್ರಾಮಗಳ ಸ್ಥಳಾಂತರದ ವಿಷಯದ ಕುರಿತಾಗಿರುವ ಸರ್ಕಾರ ಜನರ ಅಭಿಪ್ರಾಯ ಮತ್ತು ಅವರ ಮರ್ಜಿ ಅನುಸಾರವಾಗಿ ನಡೆದುಕೊಂಡು ಅವರಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸರಕಾರಕ್ಕೆ ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article