ಬೆಳಗಾವಿ : ಬಿಜೆಪಿ- ಕಾಂಗ್ರೆಸ್ ನಡುವೆ ಖಾನಾಪೂರ ಬಸ್ ನಿಲ್ಧಾಣ ಶಂಕು ಸ್ಥಾಪನೆ ವಿಚಾರದಲ್ಲಿ ಕಿತ್ತಾಟ ನಡೆದಿದೆ. ಈ ನಡುವೆ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಬೆಂಬಲಿಗರೊಂದಿಗೆ ಶಂಕು ಸ್ಥಾಪನೆ ಪೂಜೆ ನೆರವೇರಿಸಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.
ಖಾನಾಪೂರ ಬಸ್ ನಿಲ್ಧಾಣದ ಕಾಮಗಾರಿಗೆ 2020ರಲ್ಲಿ 7.35 ಕೋಟಿ ಹಣ ಮಂಜೂರಾಗಿತ್ತುಇದೇ ವರ್ಷ ಜನವರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರನಿಗೆ ಕಾಮಗಾರಿಗೆ ನೀಡಲಾಗಿತ್ತು. ಆದ್ರೆ ಗುತ್ತಿಗೆದಾರ ಇನ್ನು ಕಾಮಗಾರಿ ಶುರು ಮಾಡಿರಲಿಲ್ಲ.
ನಿನ್ನೆ ಭೂಮಿ ಪೂಜೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದ್ರೆ ರಾಜಕೀಯ ಮೇಲಾಟದಿಂದ ಜಿಲ್ಲಾಡಳಿತ ಕಾರ್ಯಕ್ರವನ್ನು ಮುಂದೂಡಿತು. ಇದರಿಂದ ಕೋಪಗೊಂಡ ಶಾಸಕಿ ಅಂಜಲಿ ತಮ್ಮ ಬೆಂಬಲಿಗರೊಂದಿಗೆ ಸೇರಿ ಬಸ್ ನಿಲ್ಧಾಣದ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.