ಬೆಳಗಾವಿ : 10 ದಿನಗಳಿಂದ ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ನಡೆಯುತ್ತಿರುವ ಶಾಸಕ ಅನಿಲ ಬೆನಕೆ ಕ್ರಿಕೆಟ್ ಟ್ರೋಫಿಯ ಫೈನಲ್ ಪಂದ್ಯ ಇಂದು ನಡೆಯಲಿದೆ.
ಮ್ಯಾಚ್ ಮೋರೆ ಎಲೆವನ್ ಹಾಗೂ ಝಿಯಾನ್ ಸ್ಪೋರ್ಟ್ಸ್ ತಂಡಗಳ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಕಳೆದ 10 ದಿನಗಳಿಂದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಠಿ ಮಾಡಿದೆ.
ಮುಂಬೈ , ಗೋವಾ,ಜಮ್ಮು ಮತ್ತು ಕಾಶ್ಮೀರ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ಕ್ರಿಕೆಟ್ ತಂಡಗಳು ಈ ಟ್ರೋಫಿಯಲ್ಲಿ ಭಾಗವಹಿಸಿ,ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿವೆ.
ಬುಧವಾರ ಬೆಳಗ್ಗೆ 10-00 ಗಂಟೆಗೆ ಫೈನಲ್ ಪಂದ್ಯ ನಡೆಯಲಿದ್ದು ಸಾವಿರಾರು ಪ್ರೇಕ್ಷಕರು ಸರ್ದಾರ್ ಮೈದಾನದಲ್ಲಿ ಸೇರಲಿದ್ದಾರೆ.
ಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಐದು ಲಕ್ಷ ಒಂದು ರೂಪಾಯಿ ಬಹುಮಾನದ ಜೊತೆಗೆ ಆಕರ್ಷಕ ಟ್ರೋಫಿ ಸಿಗಲಿದೆ.
2ನೇ ಸ್ಥಾನ ಪಡೆಯುವ ತಂಡಕ್ಕೆ ಎರಡೂವರೆ ಲಕ್ಷ ಒಂದು ರೂಪಾಯಿ ನಗದು ಬಹುಮಾನ ಹಾಗೂ ಟ್ರೋಫಿ ಸಿಗಲಿದೆ. ಹಾಗೂ ಮ್ಯಾನ್ ಆಫ್ ದೀ ಸಿರೀಜ್ ಭಾಜನರಾಗುವ ಆಟಗಾರನಿಗೆ ರಾಯಲ್ ಎನ್ಫೀಲ್ಡ್ ಬುಲೇಟ್ ಬೈಕ್ ಶಾಸಕ ಅನಿಲ ಬೆನಕೆ ನೀಡಲಿದ್ದಾರೆ.
ಇನ್ನು ಈ ಪಂದ್ಯ ನೋಡಲು ಜಿಲ್ಲೆಯ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.