Ad imageAd image

ವಕ್ಫ್ ಬೋರ್ಡ್ ದಿಂದ ಭಯದ ವಾತಾವರಣ ಮೂಡಿದೆ

ratnakar
ವಕ್ಫ್ ಬೋರ್ಡ್ ದಿಂದ ಭಯದ ವಾತಾವರಣ ಮೂಡಿದೆ
WhatsApp Group Join Now
Telegram Group Join Now

ವಕ್ಫ್ ಬೋರ್ಡ್ ದಿಂದ ಜನರ ಭಯದ ವಾತಾವರಣ ಮೂಡಿದೆ. ದೇಶದ ಐದು ಸಾವಿರ ವರ್ಷಗಳ ಇತಿಹಾಸ ಇದೆ . ರಾಮಾಯಣ, ಮಹಾಭಾರತ ಕಾಲಗಳಿಂದಲೂ ಇಲ್ಲಿ ಹಿಂದುಗಳು ವಾಸ ಮಾಡುತ್ತಾ ಇದ್ದರು. ಛತ್ರಪತಿ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜರ ಅವರ ಕಾಲದಿಂದಲೂ ಹಿಂದುಗಳು ಇಲ್ಲಿ ಕೃಷಿ ಭೂಮಿ ಹೊಂದಿದ್ದಾರೆ. ಹೊರಗಿನಿಂದ ಬಂದ ಮುಸ್ಲಿಂ ಸಮುದಾಯದವರು ವಕ್ಫ್ ಬೋರ್ಡ್ ಹೆಸರಿನಿಂದ ಕೃಷಿ ಮತ್ತು ಇತರ ಜಮೀನುಗಳನ್ನು ವಶಪಡಿಸುವ ಹೊನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಕಿರಣ್ ಜಾದವ್ ಹೇಳಿದರು.

ಪಂಚಾಯತ ಸ್ವರಾಜ ಸಮಾಚಾರದೊಂದಿಗೆ ಮಾತನಾಡಿದ ಅವರು ಭೂಕಬಳಕೆಯ ವಿರುದ್ಧ ಬಿಜೆಪಿಯು ಜನ ಅಂದೋಲನ ಮಾಡುತ್ತಾ ಇದ್ದೇವೆ ವಕ್ಫ್ ಬೋರ್ಡ್ ರದ್ದಾಗಬೇಕು ಮತ್ತು ಇಲ್ಲಿ ಜನರಿಗೆ ನ್ಯಾಯ ಸಿಗಬೇಕು ಎನ್ನುವುದು ಇದರ ಉದ್ದೇಶವಾಗಿದೆ.

ಬೆಳಗಾವಿಯಲ್ಲಿ ಡಿಸೆಂಬರ್ 1 ರಂದು ವಕ್ಫ್ ಬೋರ್ಡ್ ಭೂಕಬಳಕೆ ವಿರುದ್ಧ ಜನ ಆಂದೋಲನ ಕಾರ್ಯಕ್ರಮವನ್ನು ವಿಜಯಪುರ ಶಾಸಕರಾದ ಬಸವರಾಜ್ ಯತ್ನಾಳ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲೆಯ ಅನೇಕ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.

WhatsApp Group Join Now
Telegram Group Join Now
Share This Article