ಬೆಂಗಳೂರು: ಈ ಬಾರಿ ನಮ್ಮ ಕಾರ್ಯಕರ್ತ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇನ್ನು ತಾವು ಮುಖ್ಯಮಂತ್ರಿಯಾಗುವ ವಿಚಾರವಾಗಿ ಮಾತನಾಡಿದ ಅವರು ‘ ಸಿಎಂ ಸ್ಥಾನದ ವಿಚಾರ ಬಂದಾಗ ನಾನು ರಾಜ್ಯಕ್ಕೆ ಬರುವ ಪ್ರಶ್ನೆ ಇಲ್ಲ. ನನಗೆ ಮೋದಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಅಲ್ಲೇ ಖುಷಿಯಾಗಿ ಇದ್ದೇನೆ. ಮತಗಟ್ಟೆ ಸಮೀಕ್ಷೆ ಸುಳ್ಳಾಗುತ್ತದೆ.
ನಾವು ಬಹುಮತದ ಸರ್ಕಾರ ಮಾಡುವ ವಿಶ್ವಾಸ ಇದ್ದು, ಬೂತ್ ಮಟ್ಟದ ಕಾರ್ಯಕರ್ತರ ವರದಿ ಪ್ರಕಾರ 120 ಕ್ಕೂ ಹೆಚ್ಚು ಸೀಟುಗಳಲ್ಲಿ ಮುಂದೆ ಇದ್ದೇವೆ. ಪ್ರಧಾನಿ ಮೋದಿ ರೋಡ್ ಶೋ ಮತದಾರರ ಮೇಲೆ ಪರಿಣಾಮ ಆಗಿದೆ ಎಂದಿದ್ದಾರೆ.