Ad imageAd image

ಹಿಂದುತ್ವ ರಾಜಕಾರಣಕ್ಕೆ ಅಹಿಂದವೇ ಉತ್ತರ

ratnakar
ಹಿಂದುತ್ವ ರಾಜಕಾರಣಕ್ಕೆ ಅಹಿಂದವೇ ಉತ್ತರ
WhatsApp Group Join Now
Telegram Group Join Now

ಕಾಂಗ್ರೆಸ್ ಪಕ್ಷಕ್ಕೆ ಉಪಚುನಾವಣೆ ಒಂದು ಸವಾಲಾಗಿತ್ತು. ಕಾಂಗ್ರೆಸ್ ಸರ್ಕಾರದ ಮೇಲೆ ವಿರೋಧ ಪಕ್ಷಗಳು ವಿವಿಧ ಆರೋಪಗಳನ್ನು ಮಾಡುತ್ತಲೇ ಇದ್ದವು. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರುಗಳ ಮೇಲಿ ಆರೋಪಗಳಿಂದ ಸರ್ಕಾರ ವಿಚಲಿತ ಗೊಂಡಿತ್ತು, ಅದರಲ್ಲಿ ಕರ್ನಾಟಕದ ಉಪಚುನಾವಣೆ ಸಂಡೂರ್, ಚನ್ನಪಟ್ಟಣ, ಮತ್ತು ಶಿಗ್ಗಾವಿ ,ಈ ಮೂರು ಕ್ಷೇತ್ರಗಳು ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದವು.

ಈ ಮೂರು ಕ್ಷೇತ್ರಗಳಲ್ಲಿ ಜಾತಿವಾರು ಲೆಕ್ಕಾಚಾರ ಹಾಗೂ ಪಕ್ಷಗಳ ಬಲಾಬಲ ನೋಡಿದರೆ ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಅಷ್ಟು ಸುಲಭವಿಲ್ಲವಾಗಿತ್ತು ಆದರೆ, ಕಾಂಗ್ರೆಸ್ ಪಕ್ಷ ಈ ಮೂರು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಸಾಕಷ್ಟು ವಿಷಯಗಳಲ್ಲಿ ತಮ್ಮ ರಣನೀತಿಯನ್ನು ಮತ್ತು ಕಾರ್ಯತಂತ್ರ ರೂಪಿಸಿತ್ತು.

ಅದರಲ್ಲೂ ವಿಶೇಷವಾಗಿ ಶಿಗ್ಗಾವಿ ಕ್ಷೇತ್ರ ಜಾತಿವಾರು ಲೆಕ್ಕಾಚಾರದಲ್ಲಿ ವಿಭಿನ್ನವಾಗಿರುವ ಕ್ಷೇತ್ರ. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಭದ್ರಕೋಟೆ ಎಂದೆ ಉಲ್ಲೇಖಿಸಲಾಗಿತ್ತು ಆದರೆ, ಕಾಂಗ್ರೆಸ್ ಪಕ್ಷ ರಾಜಕೀಯ ಮಾಸ್ಟ್ರಮೈಂಡ್ ಅಹಿಂದ ಪ್ರಬಲ ನಾಯಕರಾದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಈ ಕ್ಷೇತ್ರವನ್ನು ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿತು. ಪ್ರಾರಂಭದಲ್ಲಿ ಶಿಗ್ಗಾವಿ ಕಾಂಗ್ರೆಸ್ ತೆಕ್ಕೆಗೆ ಬರುವುದು ಕನಸಿನ ಮಾತಾಗಿತ್ತಾದರೂ ಚುನಾವಣೆ ವಿಶ್ಲೇಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇದ್ದರು.


ಆದರೆ ಸಚಿವ ಸತೀಶ್ ಜಾರಕಿಹೊಳಿ ಅವರ ಚಾಣಕ್ಯ ನೀತಿ ಹಾಗೂ ಜಾತಿ ಸಮೀಕರಣದ ಪ್ರಯೋಗವನ್ನು ಅಳವಡಿಸಿಕೊಂಡು ಅಹಿಂದ ಮತಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು. ಕರ್ನಾಟಕದ ರಾಜಕಾರಣಕ್ಕೆ ಅಹಿಂದ ರಾಜಕಾರಣ ಹಾಗೂ ಅಹಿಂದ ಮತಗಳನ್ನು ಕ್ರೂಡಿ ಕರಿಸಿದರೆ ಬಿಜೆಪಿ ಹಿಂದುತ್ವದ ರಾಜಕಾರಣಕ್ಕೆ ಪರ್ಯಾಯ ಶಕ್ತಿಯಾಗಿ ನಿಲ್ಲಬಹುದು ಎಂಬುದನ್ನು ಈ ಪ್ರಯೋಗ ಸಾಬೀತುಪಡಿಸಿದೆ. ಕಾಂಗ್ರೆಸ್ ಪಕ್ಷ ಅಹಿಂದ ರಾಜಕಾರಣಕ್ಕೆ ಮಹತ್ವ ನೀಡಿದರೆ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂಬುದು ಸಚಿವ ಸತೀಶ್ ಜಾರಕಿಹೊಳಿ ಅವರ ಅಭಿಪ್ರಾಯವಾಗಿದೆ.

ಈ ಚುನಾವಣೆ ಅಹಿಂದ ರಾಜಕಾರಣಕ್ಕೆ ಮತ್ತಷ್ಟು ಶಕ್ತಿ ಹಾಗೂ ರಾಜಕೀಯ ಪ್ರಾಬಲ್ಯತೆಯನ್ನು ನೀಡಿದೆ ಭಾರತೀಯ ಜನತಾ ಪಕ್ಷದ ಹಿಂದುತ್ವದ ರಾಜಕಾರಣಕ್ಕೆ ಅಹಿಂದ ರಾಜಕಾರಣವೇ ಉತ್ತರ ಎಂಬುದು ಈ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ.

ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ದಲಿತ ಮತ್ತು ಆದಿವಾಸಿಗಳು ರಾಜ್ಯದ 39% ಮುಸ್ಲಿಂ ಕ್ರಿಶ್ಚಿಯನ್ 14.79% ಜಾತಿಗಳು 17.14% ಮತ್ತು ಪ್ರಶಿಷ್ಟ ಪಂಗಡಗಳು ಇವೆ ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ನಿಲ್ಲಬಹುದು ಎಂಬುದನ್ನು ಸಾಬೀತುಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ಚಳುವಳಿಯನ್ನು ಹುಟ್ಟಾಕಿದ್ದರು. ಈ ಚಳವಳಿ ಈಗ ಮತಗಳನ್ನು ವರ್ಗೀಕರಿಸದೆ ಸಿದ್ದರಾಮಯ್ಯನವರ ಚಾಣಕ್ಯ ನೀತಿ ಹಾಗೂ ಸತೀಶ್ ಜಾರಕಿಹೊಳಿ ಅವರ ಪ್ರಬಲ ರಾಜಕೀಯ ತಂತ್ರಗಾರಿಕೆ ಅಡಿಗೆದೆ ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ಅವರು ಅಹಿಂದ ಮತಗಳನ್ನು ಯಶಸ್ವಿಯಾಗಿದ್ದರು ಅದಾದ ನಂತರ 2010ರ ದಶಕದಲ್ಲಿ ಸಿದ್ದರಾಮಯ್ಯನವರ ಅಹಿಂದ ಚಳುವಳಿಯನ್ನು ಪ್ರಾರಂಭಿಸಿ ಅದನ್ನು ಯಶಸ್ವಿಗೊಳಿಸಿದರು ಈಗ ಅಹಿಂದ ನಾಯಕತ್ವದ ಪ್ರಬಲ ಹಾಗೂ ರಾಜಕೀಯ ಚಾಣಕ್ಯ ಹಾಗೂ ಮಾಸ್ಟ್ರುಮಂಡ್ ವಾಗಿರುವ ಸಚಿವ ಸತೀಶ್ ಜಾರಕಿಹೊಳಿ ಅಹಿಂದ ನಾಯಕದ ಪ್ರಬಲ ಶಕ್ತಿಯಾಗಿದ್ದಾರೆ. ಅಹಿಂದ ಪ್ರಯೋಗದಿಂದಾಗಿ ರಾಜ್ಯದಲ್ಲಿ ಒಂದು ಹೊಸ ರಾಜಕೀಯ ಧೃಡೀಕರಣಕ್ಕೆ ಮುನ್ನೋಟವನ್ನು ಸತೀಶ್ ಜಾರಕಿಹೊಳಿ ಅವರು ಬರೆದಿದ್ದಾರೆ ಈ ಪ್ರಯೋಗವನ್ನು ಕಾಂಗ್ರೆಸ್ ಪಕ್ಷ ಯಾವ ರೀತಿ ಕಾರ್ಯರೂಪಕ್ಕೆ ತರಲಿದೆ ನಿರೀಕ್ಷಾ ವಿಷಯವಾಗಿದೆ ! ಕಾಂಗ್ರೆಸ್ ಪಕ್ಷದಲ್ಲಿ ನಾಯಿಕತ್ವದ ಭಿನ್ನಾಭಿಪ್ರಾಯಗಳು ಇದ್ದೇ ಇದೆ ಆದರೆ ಈಗಿರುವ ರಾಜಕೀಯ ಸ್ಥಿತಿಗತಿಗಳಿಗೆ ಕಾಂಗ್ರೆಸ್ಗೆ ಅಹಿಂದ ರಾಜಕಾರಣ ಅನಿವಾರ್ಯ ಕೂಡ ಹೌದು ಅವಶ್ಯಕತೆ ಕೂಡ ಹೌದು ಇದನ್ನು ಕಾಂಗ್ರೆಸ್ ಪಕ್ಷ ಕಾರ್ಯತಂತ್ರ ರೂಪಿಸಿಕೊಳ್ಳಬೇಕಾಗಿದೆ

WhatsApp Group Join Now
Telegram Group Join Now
Share This Article