spot_img
spot_img
spot_img
20 C
Belagavi
Wednesday, October 5, 2022
spot_img

ತವರು ಕ್ಷೇತ್ರದ ಬೆಳೆ ಹಾನಿ ಪರಿಶೀಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್

spot_img

ಹಿರೇಕೆರೂರು : ಕಳೆದ ಶುಕ್ರವಾರ ಸುರಿದ ಭಾರಿ ಗಾಳಿ ಮಳೆಗೆ ಹಿರೇಕೆರೂರು ತಾಲೂಕಿನ ಯಮ್ಮಿಗನೂರು ಗ್ರಾಮದಕ್ಕೆ ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ಭೇಟಿ ನೀಡಿ ಗ್ರಾಮದಲ್ಲಾದ ಬೆಳೆನಷ್ಟವನ್ನು ವೀಕ್ಷಿಸಿ ಪರಿಶೀಲಿಸಿದರು.

ಯಮ್ಮಿಗನೂರಿನಿಗೆ ತಹಶೀಲ್ದಾರ್ ಜೊತೆ ಭೇಟಿ ನೀಡಿದ ಬಿ.ಸಿ.ಪಾಟೀಲ್, ನಷ್ವವಾದ ಬೆಳೆಯನ್ನು ಪರಿಶೀಲಿಸಿ ನಷ್ಟ ಸಂಬಂಧ ಸಂಪೂರ್ಣ ಮಾಹಿತಿ ಪಡೆದು ವರದಿ ನೀಡುವಂತೆ ಸೂಚಿಸಿದರು..ಅಲ್ಲದೇ ಇಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ತಕ್ಷಣ ಹಾಗೂ ರೈತರು ಜನರಿಂದ ದೂರು ಮನವಿ ಬಂದಲ್ಲಿ ಅಧಿಕಾರಿಗಳು ತಕ್ಷಣ ತಡಡುವುದಾಗಲೀ ನಿರ್ಲಕ್ಷ್ಯ ಮಾಡುವುದಾಗಲೀ ಮಾಡದೇ ಮೊದಲು ಸ್ಥಳ ಪರಿಶೀಲಿಸಿಸಬೇಕು.

ಅದಕ್ಕಿಂತ ಮೊದಲು ಏನಾಗಿದೆ ಎಂಬುದರ ಮಾಹಿತಿ ಪಡೆಯಬೇಕಯು. ರೈತರ ವಿಚಾರದಲ್ಲಾಗಲೀ ಅಥವಾ ಸಾರ್ವಜನಿಕರ ವಿಚಾರದಲ್ಲಾಗಲೀ ಸ್ಪಂದಿಸದ ಯಾವುದೇ ಅಧಿಕಾರಿಗಳ ಧೋರಣೆಯನ್ನು ತಾವು ಒಪ್ಪವುದಿಲ್ಲ. ಇಂತಹ ಘಟನೆಗಳು ಗಮನಕ್ಕೆ ಬಂದ ತಕ್ಷಣ ಸ್ಥಳೀಯವಾಗಿರುವ ಅಧಿಕಾರಿಗಳು ಜನಪ್ರತಿನಿಧಿಗಳು ಮೊದಲು ಭೇಟಿ ನೀಡಿ ಸಾರ್ವಜನಿಕರ ಅಳಲನ್ನು ಕೇಳಬೇಕು.

ಸ್ಥಳೀಯವಾಗಿ ಸಮಸ್ಯೆಗಳು ಪರಿಹಾರವಾಗುವುದಾದರೆ ಸ್ಥಳೀಯವಾಗಿಯೇ ಮೊದಲು ಪರಿಹರಿಸಿ ಜನರಿಗೆ ಸ್ಪಂದಿಸಬಏಕು ಎಂದು ಸೂಚಿಸಿದರು. ಬೆಳೆ ನಷ್ಟವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಬಿ.ಸಿ.ಪಾಟೀಲ್ ಹೇಳಿದರು.ತಹಶೀಲ್ದಾರ್ ಉಮಾರವರಿಗೆ ಸೂಚಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್,ನಿಜವಾಗಿಯೂ ಯಾವ ಬೆಳೆ ಹೇಗೆ ನಷ್ಟವಾಗಿದೆ. ಪರಿಹಾರವೇನು ಎಂಬುದರ ನಿಖರ ಮಾಹಿತಿ ಸಲ್ಲಿಸುವಂತೆ ನಿರ್ದೇಶಿಸಿದರು.

spot_img

Related News

ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ : ರಾಜು ಕಾಗೆ

ಬೆಳಗಾವಿ: ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಐನಾಪೂರ ಪಟ್ಟಣದಲ್ಲಿ ಮಾತನಾಡಿರುವ...

ದುರ್ಗೆ ವೇಷ ಧರಿಸಿ ಹದಗೆಟ್ಟ ವಿರುದ್ಧ ಪ್ರತಿಭಟಿಸಿದ ಬಾಲಕಿ 

ಹುಬ್ಬಳ್ಳಿ : ದುರ್ಗೆಯ ವೇಷ ಧರಿಸಿ ಬಾಲಕಿಯೊಬ್ಬಳು ವೇಷ ಧರಿಸಿ ಹುಬ್ಬಳ್ಳಿಯಲ್ಲಿ ನೀರಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಈ ವಿಡಿಯೋ ಮೂಲಕ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ಪ್ರಯತ್ನದಲ್ಲಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -