ಹಾವೇರಿ: ನಾನು ಸತ್ತ ಮೇಲೆ ನನ್ನ ಹೆಣವನ್ನ ಶಿಗ್ಗಾಂವಿ ಕ್ಷೇತ್ರದಲ್ಲಿ ಹೂಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಸಚಿವ ಆರ್.ಅಶೋಕ್ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಶಿಗ್ಗಾಂವಿ ಕ್ಷೇತ್ರದ ಜನರು ನನಗೆ ಮಾಡಿದ ಆಶೀರ್ವಾದದಿಂದ ನಾನು ಈ ಹುದ್ದೆಗೆ ಬಂದಿದ್ದೇನೆ. ಶಿಗ್ಗಾಂವಿ ಕ್ಷೇತ್ರದ ಜನ ನನ್ನನ್ನು ಮನೆ ಮಗನಂತೆ ನೋಡಿಕೊಂಡಿದ್ದಾರೆ.
ಇಲ್ಲಿಯ ಜನ ನೀಡಿದ ರೊಟ್ಟಿ ಬುತ್ತಿಯನ್ನು ಎಂದು ಮರೆಯುವುದಿಲ್ಲ. ನಾನು ಸತ್ತ ನಂತರವೂ ನನ್ನ ಹೆಣವನ್ನ ಶಿಗ್ಗಾಂವಿ ಕ್ಷೇತ್ರದಲ್ಲೇ ಹೂಳಬೇಕು ಎಂದು ಭಾವುಕರಾದರು.
ಇನ್ನು ಸಿಎಂ ಮತ್ತು ಸಚಿವ ಆರ್ ಅಶೋಕ್ ವಸತಿ ಶಾಲೆಯ ವಿದ್ಯಾರ್ಥಿನಿಗಳ ಜೊತೆ ಸಹ ಪಂಕ್ತಿ ಭೋಜನ ಮಾಡಿದರು. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಮುಳುಗಾಯಿ ಎಣಗಾಯಿ, ಗೋಧಿ ಹುಗ್ಗಿಯನ್ನ ಬೊಮ್ಮಾಯಿ ಸವಿದರು.