ವರದಿ : ರತ್ನಾಕರ ಗೌಂಡಿ
ಬೆಳಗಾವಿ : ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಿ, ಇದರಲ್ಲಿ ಕಾನೂನು ಮೀರಿ ವರ್ತಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಆಚರಣೆ ಮಾಡಿರುವ ಗಣೇಶೋತ್ಸವಕ್ಕೆ ಪೂರ್ವ ಬಾವಿ ಸಿದ್ಧತೆಗಳನ್ನು ವೀಕ್ಷಿಸಲು ಬೆಳಗಾವಿ ನಗರಕ್ಕೆ ಆಗಮಿಸಿದ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಣೆ ಮಾಡಲು ಮನವಿ ಮಾಡಿದರು. ಹಬ್ಬದ ದಿನದಲ್ಲಿ ತಂಟೆ, ಗಲಾಟೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಮಾತನಾಡಿದ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಈ ಸಲ ಗಣೇಶ್ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಬೆಳಗಾವಿ ಜನತೆಯ ಸಿದ್ದಗೊಂಡಿದ್ದಾರೆ. ಗಣೇಶ್ ಮಂಡಳಿಗಳಿಗೆ ಭೇಟಿ ನೀಡಿ ಗಣೇಶ್ ಉತ್ಸವ ವನ್ನು ಶಾಂತಿ ರೀತಿಯಾಗಿ ಆಚರಣೆ ಮಾಡಲು ಮನವಿ ಮಾಡಿ ಗಣೇಶೋತ್ಸವದ ಶುಭಾಶಯಗಳು ಕೋರಿದರು.
ಈ ವೇಳೆ ಪೊಲೀಸ್ ಕಮಿಷನರ್ ಬೋರಲಿಂಗಯ್ಯ, ಬೆಳಗಾವಿ ಎಸ್. ಪಿ . ಡಾ.ಸಂದೀಪ್, ಡಿಸಿಪಿ ಸ್ನೇಹಾ ಹಾಗೂ ಹಿರಿಯ ಅಧಿಕಾರಿಗಳು, ಕಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.